
ಪುತ್ತೂರು: ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಯಮಹಾ ಕಂಪನಿಯ ಸುಸಜ್ಜಿತ ಶೋರೂಂ ಹೊಂದಿರುವ ಶರೀಫ್ ಬೈಕ್ಸ್ ನ ಅಧಿಕೃತ ಶೋರೂಮ್ ‘ಶರೀಫ್ ಬೈಕ್ಸ್’ ಕರಾವಳಿಯ ಪ್ರಮುಖ ವಾಣಿಜ್ಯ ನಗರಗಳಲ್ಲಿ ಒಂದಾಗಿರುವ ಪುತ್ತೂರಿಗೆ ಕಾಲಿಟ್ಟಿದ್ದು, ಇಲ್ಲಿನ ದರ್ಬೆಯ ಸಂತ ಫಿಲೋಮಿನ ಕಾಲೇಜಿನ ಬಳಿ ನ.27ರಂದು ಶುಭಾರಂಭಗೊಳ್ಳಲಿದೆ.
ನೂತನ ಶೋರೂಮನ್ನು ವಿಧಾನಸಭಾದ್ಯಕ್ಷ ಯು ಟಿ ಖಾದರ್ ಉದ್ಘಾಟಿಸಲಿದ್ದಾರೆ. ಶೋರೂಮ್ ನ ಸರ್ವಿಸ್ ವಿಭಾಗವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ.
ಈ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹುಸೈನ್ ದಾರಿಮಿ ರೆಂಜಲಾಡಿ, ಮಂಗಳೂರಿನ ಡೆಲ್ಟಾ ಗ್ರೂಪ್ ನ ನಿರ್ದೇಶಕರಾದ ಸಲೀಂ ಅಹ್ಮದ್, ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ, ಕೋಟಿ – ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾದ ಎನ್ ಚಂದ್ರಹಾಸ ಶೆಟ್ಟಿ, ಸಿಝ್ಲರ್ಸ್ ಸಾಫ್ಟ್ ಡ್ರಿಂಕ್ಸ್ ನ ಮಾಲಕರಾದ ಪ್ರಸನ್ನ ಕುಮಾರ್ ಶೆಟ್ಟಿ, ಬೆಂಗಳೂರಿನ ಸೋಹಮ್ ಪವರ್ ರೆನೆವೇಬಲ್ ಎನರ್ಜಿಯ ಜನರಲ್ ಮ್ಯಾನೇಜರ್ ಹರೀಶ್ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ.






