ಅಯ್ಯಂಗೇರಿ ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ ಮಾರಕ ಹಲ್ಲೆಗೊಳಗಾಗಿದ್ದ ಐಸಮ್ಮ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಡಿಕೇರಿ ನಿವಾಸಿ ಹಾರಿಸ್ ಎಂಬಾತ ಅಯ್ಯಂಗೇರಿ ಗ್ರಾಮದ ಮದುವೆಯಾಗಿದ್ದ ಹಾರಿಸ್, ಶುಕ್ರವಾರ ಮಧ್ಯರಾತ್ರಿ ಅತ್ತೆ ಮನೆಗೆ ತೆರಳಿದ್ದು ಮನೆಯಲ್ಲಿದ್ದ ಅತ್ತೆ ಐಸಮ್ಮ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.
ತಡೆಯಲು ಬಂದ ಸಂಬಂಧಿ ಖದೀಜ ಮೇಲೂ ಹಲ್ಲೆ ನಡೆಸಿದ್ದು, ಐಸಮ್ಮ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಹಾರಿಸ್ ಮನೆಯ ಮುಂಭಾಗದ ಚಿಲಕ ಹಾಕಿ, ಹಿಂಬದಿ ಬಾಗಿಲು ಒಡೆದು ಒಳ ನುಗ್ಗಿ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ದಾಖಲಿಸಿದ್ದಾರೆ.
ತೀವ್ರ ಗಾಯಗೊಂಡಿದ್ದ ಅತ್ತೆ ಐಸಮ್ಮ ಮತ್ತು ಸಂಬಂಧಿ ಖದೀಜ ಅವರನ್ನು ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬೆನ್ನಟ್ಟಿ ನಾಪೋಕ್ಲು ಬಳಿಯ ಹೊದ್ದೂರು ಗ್ರಾಮದಿಂದ ಬಂಧಿಸಿದ್ದಾರೆ. ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














