ಭೋಜನದ ವಿರಾಮದ ನಂತರ ಸುವರ್ಣಸೌಧದಲ್ಲಿ ಅಧಿವೇಶನದ ಕಲಾಪವು ಆರಂಭವಾಗುತ್ತಿದ್ದಂತೆ ಜೆಡಿಎಸ್ ಶಾಸಕ ಸುರೇಶ್ ಬಾಬು ಅವರು, ಸುವರ್ಣಸೌಧದ ಒಳಗೆ ಗಣ್ಯರ ಭಾವಚಿತ್ರ ಉದ್ಘಾಟನೆಗೆ ನಮ್ಮನ್ನು ಕರೆಯಬೇಕಿತ್ತು ಎಂದು ಪ್ರಸ್ತಾಪಿಸಿದರು. ನಾವು ಮಾಹಿತಿ ನೀಡಿದ್ದರೂ ನೀವು ಸರಿಯಾದ ಸಮಯಕ್ಕೆ ಬರಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಉತ್ತರಿಸಿದ್ದಾರೆ.

ನಮ್ಮ ಕನ್ನಡ ನೆಲದ ಮೊದಲ ಪ್ರಧಾನಿ ಹೆಚ್.ಡಿ.ದೇವೇಗೌಡರದ್ದು ಫೋಟೋ ಸಹ ಹಾಕಬೇಕಿತ್ತು ಎಂಬ ಸುರೇಶ್ ಅವರ ಅಭಿಪ್ರಾಯಕ್ಕೆ ಉತ್ತರಿಸಿದ ಸ್ಪೀಕರ್, ನಮಗೂ ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ಇಲ್ಲಿ ಅಗಲಿದ ಗಣ್ಯರ ಫೋಟೋ ಹಾಕಲಾಗಿದೆ. ದೇವೇಗೌಡರ ಫೋಟೋವನ್ನು ಈಗಲೇ ಹಾಕಿ ಎಂದರೆ ಎಂತಾ ಮಾಡೋದು ಹೇಳಿ ಎಂದು ತಮ್ಮ ದಾಟಿಯಲ್ಲೇ ಸ್ಪೀಕರ್ ಸದನ ಉದ್ದೇಶಿಸಿ ಉತ್ತರಿಸಿದ ಪ್ರಸಂಗ ನಡೆಯಿತು.

ಯಾವ್ಯಾವ ನಾಯಕರ ಫೋಟೋ ಹಾಕಲಾಗಿದೆಯೋ, ಆ ಬಗ್ಗೆ ಕಾರಣ, ಮಹತ್ವ ಏನೆಂಬುವುದರ ಬಗ್ಗೆ ವಿವರಣೆಯನ್ನು ಸ್ವಲ್ಪ ನೀಡಿ ಮಾನ್ಯ ಸಭಾಧ್ಯಕ್ಷರೇ ಎಂದು ಸುರೇಶ್ ಬಾಬು ಮನವಿ ಮಾಡಿಕೊಂಡರು. ಆಗ ಸ್ಪೀಕರ್ ಜೊತೆಗೆ, ಸಿಎಂ ಸಿದ್ದರಾಮಯ್ಯ ಆಡಳಿತರೂಢ ಪಕ್ಷದ ನಾಯಕರು ಮಾತು ಮುಂದುವರಿಸಿದರು. ಅಗಲಿದ ಗಣ್ಯರು, ದೇಶಕ್ಕೆ ಸೇವೆ, ಕೊಡುಗೆ ನೀಡಿದವರ ಫೋಟೋ ಹಾಕಲಾಗಿದ್ದು, ಯಾಕೆ ಹಾಕಲಾಗಿದೆ ಎಂಬ ಕಾರಣ ಪ್ರಶ್ನೆಗಳನ್ನು ಭಾರತೀಯರಾದ ನಾವೆಲ್ಲ ಕೇಳಬಾರದು ಎಂದು ಸಚಿವ ಹೆಚ್.ಕೆ.ಪಾಟೀಲ್ ಅವರು ಧ್ವನಿಗೂಡಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!