ಪುತ್ತೂರು:ಪುತ್ತೂರಿನ ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್‌ರಸ್ತೆಯ ರಾಧಾ’ಸ್ ಫ್ಯಾಮಿಲಿ ಶೋ.ರೂಂನಲ್ಲಿ ಮೂರು ತಿಂಗಳುಗಳ ನಡೆದ ಆಫರ್‌ಗಳ ಬಿಗ್‌ಬಾಸ್ ರಾಧಾ’ಸ್ ಉತ್ಸವದಲ್ಲಿ ಅಮೋಘ ಡಿಸ್ಕೌಂಟ್‌ಗಳೊಂದಿಗೆ ಜವುಳಿ ಖರೀದಿಸಿ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಅವಕಾಶದ ಮೂರನೇ ತಿಂಗಳ ಬಂಪರ್ ಡ್ರಾ ಹಾಗೂ ೧೨ನೇ ವಾರದ ಡ್ರಾ.ವು ಜ.೧ರಂದು ಮಳಿಗೆಯಲ್ಲಿ ಗ್ರಾಹಕರ ಸಮ್ಮುಖದಲ್ಲಿ ನಡೆಸಲಾಯಿತು.


ಕೃಷ್ಣವೇಣಿ ಮುಳಿಯರವರು ಬಂಪರ್ ಡ್ರಾವನ್ನು ನಡೆಸಿಕೊಟ್ಟರು. ನಗರ ಸಭಾ ಸದಸ್ಯೆ ಇಂದಿರಾ ಪುರುಷೋತ್ತಮ, ಸಂಸ್ಥೆಯ ಪಾಲುದಾರರಾದ ಗಣೇಶ್ ಕಾಮತ್, ಪ್ರಕಾಶ್ ಕಾಮತ್, ಪ್ರಬಂಧಕರು, ವಿಭಾಗ ಮುಖ್ಯಸ್ಥರು ಮತ್ತು ಸಿಬಂದಿಗಳು ಉಪಸ್ಥಿತರಿದ್ದರು.
ಗಾಯತ್ರಿ ಐತ್ತೂರು ಬಂಪತ್ ಬಹುಮಾನ್ ಟಿವಿಎಸ್ ಜ್ಯುಪಿಟರ್‌ನ ವಿಜೇತರಾದರು. ೧೨ನೇ ವಾರದ ಡ್ರಾದಲ್ಲಿ ಕವಿತಾ ಉಪ್ಪಿನಂಗಡಿ(೧೦೭೪೧) ಪ್ರಥಮ ಬಹುಮಾನ ಫ್ರಿಜ್, ಪ್ರಮೀಳಾ ಬಿ.ಕೆ ಸುಳ್ಯ(೯೯೯೯) ದ್ವಿತೀಯ ಬಹುಮಾನ ಮಿಕ್ಸರ್ ಗ್ರೈಂಡರ್, ಸ್ವಪ್ನ ಲೋಬೋ ಮರೀಲ್(೯೭೨೯) ತೃತೀಯ ಬಹುಮಾನ ಸಿಂಗಲ್ ಕ್ವಾಟ್ ಬಹುಮಾನಗಳ ವಿಜೇತರಾದರು. ಕವಿತಾ ಉಪ್ಪಿನಂಗಡಿ(೧೦೭೪೨), ಅಶೋಕ್ ಶೋಭಾ ಬೆಳಾವು(೯೬೬೯), ಫಾತಿಮಾ ಉಪ್ಪಿನಂಗಡಿ(೧೦೬೬೨), ರಮೇಶ್ ಪಿ. ಪಂಚೋಡಿ(೧೦೦೫೭), ಕುಮಾರ್ ದುರ್ಗಪಿಶರಿಸ್(೧೦೨೦೦)ಪಾರ್ವತಿ ಶೆಣೈ ಉಡುಪಿ(೧೦೬೫೦), ಆಯಿಶಾ ವಾಫಿಯಾ ಕೆಮ್ಮಾಯಿ(೧೦೦೫೦), ಜಶ್ವೆತ್ ಕಡಬ(೯೭೯೪), ಪುನೀತ್ ಸುಬ್ರಹ್ಮಣ್ಯ(೯೮೮೯), ಇನರಾ ಫಾತಿಮಾ ಕೊಯಿಲ(೧೦೪೧೬), ದಿಶ್ಮಿ ಎ ವಿಟ್ಲ(೧೦೭೧೫), ಆಯಿಶಾ ಇಶಾನ್ ಕನ್ಯಾನ(೧೦೨೨೨), ದೀಪ್ತಿ ಬಂಟ್ವಾಲ(೧೦೬೨೫), ಅದೀನ್ ಬಿಳಿಯೂರು(೯೬೮೫), ಇಂದಿರಾ ಡಿ ರೈ ಮಾಡಾವು(೧೦೨೭೦), ವಸಂತ ಕುಮಾರ್ ಬದಿಯಡ್ಕ(೧೦೩೪೬), ಅಶ್ವಥ್ ಎಸ್ ಬಂಟ್ವಾಳ(೧೦೬೨೨), ಹರೀಶ್ ಪುತ್ತೂರು(೯೬೩೦), ಗೋಪಾಲಕೃಷ್ಣ ಜಿ. ಚಾರ್ವಾಕ(೧೦೪೪೬) ಹಾಗೂ ದೇವಿಪ್ರಸಾದ್ ಕಡಬ(೧೦೪೯೨) ಆಕರ್ಷಕ ಬಹುಮಾನಗಳ ವಿಜೇತರಾದರು.
ವಧುವಿಗೆ ಒಳಿದ ಬಂಪರ್ ಬಹುಮಾನ
ಅಕ್ಟೋಬರ್ ತಿಂಗಳಿನಲ್ಲಿ ನಡೆದ ಪ್ರಥಮ ವಾರದ ಡ್ರಾ.ದಲ್ಲಿ ಡಿಸೆಂಬರ್‌ನಲ್ಲಿ ವಿವಾಹವಾಗಲಿದ್ದ ಬಂಟ್ವಾಳದ ವಗ್ಗದ ವರನ ಮನೆಯವರಿಗೆ ದ್ವಿತೀಯ ಬಹುಮಾನ ಕುಶನ್ ಸೋಫಾ ಹಾಗೂ ಸೂರಿಕುಮೇರಿನ ವಧುವಿನ ಮನೆಯವರು ತೃತೀಯ ಬಹುಮಾನ ೩೨ ಇಂಚಿನ ಟಿವಿಯ ವಿಜೇತರಾಗುವ ಮೂಲಕ  ಲಕ್ಕಿ ಜೋಡಿಗಳಾಗಿದ್ದರು. ಇದೀಗ ಕೊನೆಯ ಬಂಪರ್ ಡ್ರಾದಲ್ಲಿ ಜ.೨೨ರಂದು ವಿವಾಹವಾಗಲಿರುವ ಕಡಬ ತಾಲೂಕಿನ ಐತ್ತೂರು ಗ್ರಾಮದ ಅಮುನಿಪಾಲು ಗಾಯತ್ರಿಯವರಿಗೆ ಬಂಪರ್ ಬಹುಮಾನ ಟಿವಿಎಸ್ ಜ್ಯುಪಿಟರ್ ದ್ವಿಚಕ್ರ ವಾಹನ ಒಳಿದು ಬಂದಿದೆ. ಡ್ರಾ. ನಡೆಸುವ ಪ್ರಾರಂಭದಲ್ಲಯೇ ಅತಿಥಿಯಾಗಿದ್ದ ಕೃಷ್ಣವೇಣಿ ಮುಳಿಯರವರ ದ್ವಿಚಕ್ರ ವಾಹನದ ಆವಶ್ಯಕತೆಯಿರುವವರಿಗೇ ಅದೃಷ್ಠ ಒಳಿಯಲಿ ಎಂದು ಹೇಳಿದ್ದರು. ಅದರಂತೆ ದ್ವಿಚಕ್ರ ವಾಹನ ಹೊಂದಿರದ ವಧು ಗಾಯತ್ರಿಯವರಿಗೆ ಅದೃಷ್ಠ ಒಳಿದಿರುವುದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *

Join WhatsApp Group
error: Content is protected !!