ರೆಂಜ: ಫಾರೂಖ್ ಜುಮಾ ಮಸ್ಜಿದ್ ಹಯಾತ್ ನಗರ, ರೆಂಜ ಇಲ್ಲಿಯ ಆಡಳಿತ ಸಮಿತಿ ಹಾಗೂ ಸರ್ವ ಜಮಾಅತರ ಪರವಾಗಿ ಗೌರವಾಧ್ಯಕ್ಷ ಖುದುವತುಸ್ಸಾದಾತ್ ಸಯ್ಯಿದ್ ಕೆ.ಎಸ್ ಆಟ್ಟಕ್ಕೋಯ ತಂಙಳ್ ಕುಂಬೋಳ್ ರವರಿಗೆ ಇಂದು ಮಗ್ರಿಬ್ ನಮಾಝ್ ಬಳಿಕ ಫಾರೂಖ್ ಜುಮಾ ಮಸ್ಜಿದ್ ವಠಾರದಲ್ಲಿ ಗೌರವಾರ್ಥ ಸನ್ಮಾನ ಸಮಾರಂಭ ನಡೆಯಲಿದೆ.

ಜ. 14 ರಿಂದ  16 ರ ತನಕ ಸ್ವಲಾತ್ ವಾರ್ಷಿಕ ಹಾಗೂ ತಾಜುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮವು  ನಡೆಯಲಿದ್ದು; ಇದರ ಭಾಗವಾಗಿ
ಕಳೆದ ಮೂರು ದಶಕಗಳಿಂದ  ಗೌರವಾಧ್ಯಕ್ಷ ಸ್ಥಾನದಲ್ಲಿದ್ದು ಜಮಾಅತಿನ ಸರ್ವಾಂಗೀಣ ಉನ್ನತಿಗಾಗಿ ಶ್ರಮಿಸಿದ ಸಯ್ಯಿದ್ ಖುದುವತುಸ್ಸಾದಾತ್ ಕುಂಬೋಳ್ ಕೆ.ಎಸ್ ಆಟ್ಟಕ್ಕೋಯ ತಂಙಳ್ ರವರಿಗೆ ಗೌರವಾರ್ಪಣೆ ಸಮಾರಂಭ ಏರ್ಪಡಿಸಲಾಗಿದೆ.
ಸಯ್ಯಿದ್ ಹಾಷಿಂ ತಂಙಳ್ ಬಾಅಲವಿ ಕೊರಿಂಗಿಲ ದುಆಶೀರ್ವಚನ ನೀಡಲಿದ್ದು, ಸ್ಥಳೀಯ ಮುದರ್ರಿಸ್ ಹಾಫಿಳ್ ಅಸಿಫ್ ಸಖಾಫಿ ಸಭೆಯನ್ನು ಉದ್ಘಾಟಿಸಲಿದ್ದಾರೆ.
ಹಾಫಿಳ್ ಉವೈಸ್ ಹಿಶಾಮಿ ಉಳ್ಳಾಲ ಮುಖ್ಯ ಭಾಷಣ ಮಾಡಲಿದ್ದಾರೆ.
ಸಭೆಯಲ್ಲಿ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು, ಅಬ್ಬಾಸ್ ಸಅದಿ ಡಮ್ಮಂಗರ, ಅಯ್ಯೂಬ್ ವಹಬಿ ಕೊರಿಂಗಿಲ, ಅಬೂಅಝ್ಮಿಯಾ ಕೆ.ಎಂ.ಎಚ್. ಫಾಝಿಲ್ ಹನೀಫೀ ತಂಬುತ್ತಡ್ಕ, ಅಬ್ಬಾಸ್ ಮದನಿ ರೆಂಜ, ಅಬ್ದುಲ್ ಹಮೀದ್ ಮದನಿ ಪೇರಲ್ತಡ್ಕ, ಶರೀಫ್ ಮುಸ್ಲಿಯಾರ್ ಕೂಟತ್ತಾನ,ಸ್ವಾದಿಕ್ ಮುಸ್ಲಿಯಾರ್ ಏಂಪಕ್ಕಲ್, ಹನೀಫ್ ಸಖಾಫಿ ರೆಂಜ, ಶರೀಫ್ ಸಅದಿ ಗುಮ್ಮಟ ಗದ್ದೆ, ಅಶ್ರಫಲೀ ಹಿಮಮಿ , ಜಮಾಅತ್ ಅಧ್ಯಕ್ಷ ಅಬ್ಬಾಸ್ ಹಾಜಿ ಮಣ್ಣಾಪು ಸಹಿತ ಇನ್ನಿತರ ಧಾರ್ಮಿಕ, ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ
ಹಾಗೂ ಜನವರಿ 15 ರಂದು ಬುಧವಾರ ಕೇರಳದ ಪ್ರಖ್ಯಾತ ಪ್ರಭಾಷಣಗಾರ ಲುಖ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ರವರ ಪ್ರಭಾಷಣ ನಡೆಯಲಿದೆ ಎಂದು ಜಮಾಅತ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ಮೂಸಾಕುಂಞಿ ಚೆಲ್ಯಡ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!