
ಪುತ್ತೂರು: ವ್ಯಾಟ್ಸಪ್ ಸ್ಟೇಟಸ್ ನಲ್ಲಿ ಶಾಸಕ ಅಶೋಕ್ ರೈ ವಿರುದ್ದ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಮುಂಡೂರು ಗ್ರಾಮದ ಪೊನೊಣಿ ನಿವಾಸಿ ಸೇಸಪ್ಪಶೆಟ್ಟಿಯವರು ಶಾಸಕರ ಕಚೇರಿಗೆ ಬಂದು ಕ್ಷಮೆಯಾಚಿಸಿದ್ದಾರೆ.
ಕೆಲದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ ಅವರು ಪುತ್ತೂರಿನಲ್ಲಿ ಒಂದು ಗೋಣಿ ಸಿಮೆಂಟಿನ ಕೆಲಸ ಆಗಿಲ್ಲ ಎಂದು ಮಾಜಿ ಶಾಸಕರಾದ ಸಂಜೀವ ಮಟಂದೂರು ನೀಡಿದಹೇಳಿಕೆ ಗೆ ಪ್ರತಿಕ್ರಿಯೆ ನೀಡಿ ” ಒಂದು ಗೋಣಿ ಸಿಮೆಂಟಿನ ಕೆಲಸ ಆಗಿಲ್ಲ ಎಂದು ಹೇಳಿದವರಿಗೆ ಒಂದು ಕೋಟಿ ಖಾಲಿ ಸಿಮೆಂಟಿನ ಗೋಣಿ ಇದೆ ,ಮುಂದೆ ಅವರಿಗೆ ಗೋಣಿ ವ್ಯಾಪಾರ ಮಾಡಬಹುದು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಅಪಹಾಸ್ಯಕರ ರೀತಿಯಲ್ಲಿ ಪೋಸ್ಟರ್ ಮಾಡಿ ಸೇಸಪ್ಪ ಶೆಟ್ಟಿಯವರು ಸ್ಟೇಟಸ್ ನಲ್ಲಿ ಹಾಕಿದ್ದರು. ಈ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮ ಜಾಗದ ಅಕ್ರಮ ಸಕ್ರಮವನ್ನು ಶಾಸಕ ಅಶೋಕ್ ರೈ ಬಳಿ ಬಂದು ಮಾಡಿಸಿಕೊಂಡು ಹೋದ ಸೇಸಪ್ಪ ಶೆಟ್ಟಿಗೆ ಕೃತಜ್ಞತೆ ಕೂಡಾ ಇಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಅವರ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಟೀಕಾತ್ಮಕ ಬರಹಗಳನ್ನು ಪ್ರಕಟಿಸಿದ್ದರು.
ಕಚೇರಿಗೆ ಬಂದು ಕ್ಷಮೆ ಕೇಳಿದರು:
ತಾನು ಹಾಕಿದ ಸ್ಟೇಟಸ್ ವಿಚಾರ ವೈರಲ್ ಆಗುತ್ತಿದ್ದಂತೆಯೇ ಶಾಸಕ ರ ಕಚೇರಿಗೆ ಬಂದ ಸೇಸಪ್ಪ ಶೆಟ್ಟಿಯವರು ಕಣ್ ತಪ್ಪಿ ಇದು ನಡೆದಿದೆ. ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡರು. ಈ ವೇಳೆ ಮಾತನಾಡಿದ ಶಾಸಕರು ನಮ್ಮಲ್ಲಿಗೆ ಬಂದು ಕೆಲಸ ಮಾಡಿಕೊಂಡು ಹೋಗಿ ನಮ್ಮನ್ನೇ ಅಪಹಾಸ್ಯ ಮಾಡಿದ್ದೀರಲ್ಲ ಎಂದು ಹೇಳಿದರು. ನಾನು ಮಾಡಿದ್ದು ತಪ್ಪಾಗಿದೆ ಕ್ಷಮಿಸಿ ಎಂದು ಸೇಸಪ್ಪ ಶೆಟ್ಟಿ ಮತ್ತೆ ಮನವಿಮಾಡಿದರು. ನಾನುಕ್ಷಮಿಸಿದ್ದೇನೆ.ಮುಂದೆ ನಮ್ಮ ಜೊತೆಯೇ ಇರಿ ಎಂದು ಶಾಸಕರು ಸೂಚಿಸಿದರು.
ಸ್ಟೇಟಸ್ ನಲ್ಲಿ ಅಪಹಾಸ್ಯ ಮಾಡಿ ಹಾಲಿದ್ದರು.ಅವರ ಅಕ್ರಮ ಸಕ್ರಮವನ್ನು ಬಿಜೆಪಿಯವರು ಮಾಡಿಕೊಟ್ಟಿರಲಿಲ್ಲ,ನಾನುಮಾಡಿ ಕೊಟ್ಟಿದ್ದೆ ಆ ಬಳಿಕ ನನ್ನ ವಿರುದ್ದವೇ ಸ್ಟೇಟಸ್ ಹಾಕಿದ್ದರು. ಕಚೇರಿಗೆ ಬಂದು ಕ್ಷಮಿಸಿ ಅಂದ್ರು ಕ್ಷಮಿಸಿದ್ದೇನೆ.
ಅಶೋಕ್ ರೈ ಶಾಸಕರು,ಪುತ್ತೂರು
ನನ್ನಿಂದ ತಪ್ಪಾಗಿದೆ, ಹಾಕಬಾರದಿತ್ತು, ಕಣ್ ತಪ್ಪಿನಿಂದ ಆವಾಂತರ ಆಗಿದೆ. ಸ್ಟೇಟಸ್ ಹಾಕಿರುವುದು ನನಗೆ ಬೇಸರ ತಂದಿದೆ. ನನಗೆ ಶಾಸಕರು ತುಂಬ ಉಪಕಾರ ಮಾಡಿದ್ದಾರೆ ಅವರನ್ನು ಮರೆಯಲು ಸಾಧ್ಯವಿಲ್ಲ,ಮುಂದೆ ಅವರ ಜೊತೆಯೇ ಇರುತ್ತೇನೆ.
ಸೇಸಪ್ಪ ಶೆಟ್ಟಿ ಮುಂಡೂರು
