
ಪತ್ರಿಕೋದ್ಯಮದ ಹೆಸರಲ್ಲಿ ಜನಪ್ರತಿನಿಧಿಗಳ ಬಗ್ಗೆ ಅವಹೇಳನಕಾರಿ ಕಂಟೆಂಟ್ ಮಾಡುವ ನಕಲಿ ಪತ್ರಕರ್ತರನ್ನು ವಿವಸ್ತ್ರಗೊಳಿಸಿ ಸಾರ್ವಜನಿಕ ಮೆರವಣಿಗೆ ಮಾಡಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ.
ತಮ್ಮ ಕುಟುಂಬದ ಬಗ್ಗೆ ಯುಟ್ಯೂಬ್‌ನಲ್ಲಿ ಅವಹೇಳನಕಾರಿ ಕಂಟೆಂಟ್ ಪೋಸ್ಟ್ ಆಗಿದ್ದರ ಬಗ್ಗೆ ಉತ್ತರಿಸಿ ಅದರಲ್ಲಿ ಬಳಸಲಾಗಿದ್ದ ಭಾಷೆಯಿಂದ ರಕ್ತ ಕುದಿಯುವಂತಾಗಿದೆ ಎಂದು ಹೇಳಿದ್ದಾರೆ.
ಜತೆಗೆ ಬಿಆರ್‌ಎಸ್ ವಿರುದ್ಧವೂ ಕಿಡಿಕಾಡಿದ ರೇವಂತ್, “ಪೋಸ್ಟ್ ವಿಚಾರವಾಗಿ ಪ್ರಕರಣ ದಾಖಲಾಗಿದ್ದು, ಇಬ್ಬರು ಮಹಿಳಾ ಪತ್ರಕರ್ತೆಯರನ್ನು ಬಂಧಿಸಲಾಗಿದೆ. ಈ ಬಂಧನವನ್ನು ಬಿಆರ್‌ಎಸ್ ನಾಯಕರು ಖಂಡಿಸಿದ್ದಾರೆ. ಅವರ ಕುಟುಂಬಸ್ಥರ, ತಾಯಿ, ಸೋದರಿ, ಹೆಂಡತಿಯ ವಿರುದ್ಧ ಮಾತನಾಡಿದ್ದರೆ ಬಿಆರ್‌ಎಸ್ ನಾಯಕರು ಮೌನವಾಗಿ ಇರುತ್ತಿದ್ದರೇ? ಎಂದು ಪ್ರಶ್ನಿಸಿದ್ದಾರೆ









