
ಟೋಕಿಯೊದ ರೆಸ್ಟೋರೆಂಟ್ ಮಾಲೀಕನೊಬ್ಬ ದುಬಾರಿ ಅಂತ್ಯಕ್ರಿಯೆಯ ವೆಚ್ಚವನ್ನು ತಪ್ಪಿಸಲು ಎರಡು ವರ್ಷಗಳ ಕಾಲ ತನ್ನ ತಂದೆಯ ಮೃತದೇಹವನ್ನು ವಾರ್ಡ್ರೋಬ್‌ನಲ್ಲಿ ಬಚ್ಚಿಟ್ಟಿದ್ದ. ಪೊಲೀಸರು ಆತನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಜಪಾನ್‌ನಲ್ಲಿ 56 ವರ್ಷದ ವ್ಯಕ್ತಿಯೊಬ್ಬ ಜನವರಿ 2023ರಲ್ಲಿ ಮರಣಹೊಂದಿದ ತನ್ನ ತಂದೆಯ ಮರಣದ ನಂತರ ಅಂತ್ಯಕ್ರಿಯೆಯ ವೆಚ್ಚವನ್ನು ತಪ್ಪಿಸಲು ಎರಡು ವರ್ಷಗಳ ಕಾಲ ಶವವನ್ನು ತನ್ನ ಮನೆಯ ಕಪಾಟಿನಲ್ಲಿ ಅಡಗಿಸಿಟ್ಟಿದ್ದ.
ಟೋಕಿಯೊದಲ್ಲಿರುವ ನೊಬುಹಿಕೊ ಸುಜುಕ್ ಅವರ ಚೈನೀಸ್ ರೆಸ್ಟೋರೆಂಟ್ ಒಂದು ವಾರ ಮುಚ್ಚಲ್ಪಟ್ಟಾಗ ಕೃತ್ಯಗಳು ಬೆಳಕಿಗೆ ಬಂದವು, ಇದು ನೆರೆಹೊರೆಯವರಲ್ಲಿ ಕಳವಳವನ್ನು ಉಂಟುಮಾಡಿತು, ನಂತರ ಅವರು ಪೊಲೀಸರನ್ನು ಸಂಪರ್ಕಿಸಿದರು. ಪೊಲೀಸರು ಮನೆಗೆ ಹೋದಾಗ, ಬೀರುವಿನಲ್ಲಿ ಅವನ ತಂದೆಯ ಅಸ್ಥಿಪಂಜರ ಸಿಕ್ಕಿತು.
ನೊಬುಹಿಕೊ ಸುಜುಕಿಯನ್ನು ವಿಚಾರಣೆ ನಡೆಸಿದಾಗ, ತನ್ನ ತಂದೆ ಜನವರಿ 2023 ರಲ್ಲಿ 86 ನೇ ವಯಸ್ಸಿನಲ್ಲಿ ನಿಧನರಾದರು. ತಂದೆಯ ಮರಣದ ನಂತರ, ದೇಹವನ್ನು ಮರೆಮಾಡಿದೆ. ತಂದೆಯ ಸಾವಿನ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ ಆದರೆ ಆ ದಿನ ಕೆಲಸದಿಂದ ಮನೆಗೆ ಹಿಂದಿರುಗಿದಾಗ, ತನ್ನ ತಂದೆಯ ನಿರ್ಜೀವ ದೇಹವನ್ನು ಕಂಡುಕೊಂಡೆ. ಅಂತ್ಯಕ್ರಿಯೆ ತುಂಬಾ ದುಬಾರಿಯಾಗಿತ್ತು. ಹೀಗಾಗಿ ಮೃತದೇಹವನ್ನು ಮುಚ್ಚಿಟ್ಟೆ ಎಂದು ಹೇಳಿಕೊಂಡಿದ್ದಾನೆ.
ಪೊಲೀಸರ ಪ್ರಕಾರ, ಸುಜುಕ್ ಆರಂಭದಲ್ಲಿ ತನ್ನ ಕೃತ್ಯಗಳ ಬಗ್ಗೆ ತಪ್ಪಿತಸ್ಥನೆಂದು ಭಾವಿಸಿದ್ದನು, ಆದರೆ ನಂತರ ಅವನಿಗೆ ನಿರಾಳವಾಯಿತು. ಸುಜುಕ್ ನ್ನು ಬಂಧಿಸಲಾಗಿದ್ದು, ತಂದೆಯ ಪಿಂಚಣಿಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ.
ಜಪಾನ್‌ನಲ್ಲಿ ನಡೆದ ಇಂತಹ ಘಟನೆಯ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿಯೂ ಪ್ರತಿಕ್ರಿಯೆಗಳು ಹೊರಹೊಮ್ಮಿವೆ. 56 ವರ್ಷದ ವ್ಯಕ್ತಿ ತನ್ನ ಪಿಂಚಣಿ ಪಡೆಯಲು ತನ್ನ ತಂದೆಯನ್ನು ಕೊಂದಿದ್ದಾನೆ ಎಂದು ಕೆಲವರು ಹೇಳಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸ್ಯಾನ್ ಹೋಲ್ಡಿಂಗ್ಸ್ ಇಂಕ್ ಸಮೀಕ್ಷೆಯ ಪ್ರಕಾರ, ಜಪಾನ್‌ನಲ್ಲಿ ಸರಾಸರಿ ಅಂತ್ಯಕ್ರಿಯೆಯ ವೆಚ್ಚ 1.3 ಮಿಲಿಯನ್ ಯೆನ್ (US$8,900) ರಷ್ಟಿದೆ, ಇದು ಕೋವಿಡ್-19 ಸಾಂಕ್ರಾಮಿಕ ರೋಗದಿಂದ 156,000 ಯೆನ್‌ನ ಇಳಿಕೆಯಾಗಿದೆ, ಏಕೆಂದರೆ ಸರಳ ಸಮಾರಂಭಗಳು ಹೆಚ್ಚು ಸಾಮಾನ್ಯವಾಗುತ್ತಿವೆ. ಶೇಕಡಾ 60 ಕ್ಕಿಂತ ಹೆಚ್ಚು ಜನರು ಅಂತ್ಯಕ್ರಿಯೆಯ ವೆಚ್ಚವು 1 ಮಿಲಿಯನ್ ಯೆನ್‌ಗಿಂತ ಕಡಿಮೆ ಇರಬೇಕೆಂದು ನಿರೀಕ್ಷಿಸಿದ್ದಾರೆ.






