ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಲೇ ಇದೆ. ಕತ್ತಲಾಗುತ್ತಿದ್ದಂತೆಯೇ ಪಾಕಿಸ್ತಾನ ಡ್ರೋನ್ ಮತ್ತು ಕ್ಷಿಪಣಿ ಸಹಾಯದಿಂದ ದಾಳಿ ಮಾಡುತ್ತಿದೆ. ಭಾರತವೂ ಆ ಕ್ಷಿಪಣಿ, ಡ್ರೋನ್ಗಳನ್ನು ಹೊಡೆದು ಹಾಕುತ್ತಿದೆ.

ಈ ಸಂಘರ್ಷದ ನಡುವೆ, ಗಡಿ ನಿಯಂತ್ರಣ ರೇಖೆಯ ಬಳಿ ಸ್ಫೋಟಗೊಳ್ಳದ ಕ್ಷಿಪಣಿಯೊಂದು ಪತ್ತೆಯಾಗಿದೆ.

ಇತ್ತೀಚೆಗೆ ಎಲ್‌ಒಸಿಯಲ್ಲಿ ನಡೆದ ಗುಂಡಿನ ಚಕಮಕಿ, ಡ್ರೋನ್ ದಾಳಿಯ ಮಧ್ಯದಲ್ಲಿ ಕ್ಷಿಪಣಿ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಆದರೆ, ಇಬ್ಬರು ಯುವಕರು ಹಾಡು ಹಾಡುತ್ತಾ ಆ ಕ್ಷಿಪಣಿ ಜೊತೆ ರೀಲ್ಸ್ ಮಾಡುತ್ತಾ, ಸೆಲ್ಫಿಗೆ ಪೋಸ್ ಕೊಡುತ್ತಾ, ಜೋಕ್ ಹೇಳುತ್ತಾ ಪೋಸ್ ಕೊಡುತ್ತಿದ್ದಾರೆ. ಆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಕ್ಷಿಪಣಿ ಹಿಡಿದಿಟ್ಟುಕೊಂಡಿದ್ದರೆ, ಇನ್ನೊಬ್ಬ ವ್ಯಕ್ತಿ ಅದನ್ನು ಎತ್ತಲು ಯತ್ನಿಸಿದ್ದಾನೆ. ಈ ಯುವಕರ ಹುಚ್ಚಾಟ ಕಳವಳ ಹುಟ್ಟಿಹಾಕಿದೆ. ಅಪಾಯದ ಇದೆ ಎಂದು ಗೊತ್ತಿದ್ದರೂ, ಸ್ಫೋಟಗೊಳ್ಳದ ಕ್ಷಿಪಣಿ ಪಕ್ಕದಲ್ಲಿ ಪೋಸ್ ನೀಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ

ಪತ್ರಕರ್ತ ಗಗನ್‌ದೀಪ್ ಸಿಂಗ್ ಅನ್ನೋರು ಈ ವಿಡಿಯೋ ಹಂಚಿಕೊಂಡಿದ್ದು, ‘ದಯವಿಟ್ಟು ಇಂತಹ ಶಸ್ತ್ರಾಸ್ತ್ರಗಳನ್ನು ಮುಟ್ಟಬೇಡಿ. ಯಾವುದೇ ಕ್ಷಣದಲ್ಲಿ ಸ್ಫೋಟವಾಬಹುದು. ನಿಮ್ಮ ಜೀವಕ್ಕೆ ಹಾನಿಯಾಗಬಹುದು’ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!