
ಭಾರತ ಪಾಕಿಸ್ತಾನದ ಮಧ್ಯೆ ಕದನ ವಿರಾಮಕ್ಕೆ ಒಪ್ಪಂದವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ನಿರಂತರ ಮಾತುಕತೆ. ನನ್ನ ನೇತೃತ್ವದಲ್ಲಿ ಅಮೆರಿಕ ನಡೆಸಿದ ಚರ್ಚೆಗಳ ಬಳಿಕ ಭಾರತ-ಪಾಕಿಸ್ತಾನದ ಮಧ್ಯೆ ಕದನ ವಿರಾಮಕ್ಕೆ ಒಪ್ಪಿಗೆ ನೀಡಿವೆ.
ಉಭಯದೇಶಗಳು ಶಾಂತಿ ಕಾಪಾಡಲು ಮುಂದಾಗಿರುವುದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಮಾತನಾಡಿದ್ದ ಡೋನಾಲ್ಡ್ ಟ್ರಂಪ್, ಶಾಂತಿ ಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಎರಡೂ ದೇಶಗಳಿಗೆ ಸಲಹೆ ನೀಡಿದ್ದರು.
ಈ ಕುರಿತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದು ಭಾರತ ಹಾಗೂ ಪಾಕಿಸ್ತಾನ ಯುದ್ಧ ನಿಲ್ಲಸಿ ಸಂಧಾನಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಬರೆದುಕೊಂಡಿದ್ದಾರೆ
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೂಬಿಯೊ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಜೊತೆ ಪ್ರತ್ಯೇಕವಾಗಿ ಮಾತನಾಡಿ, ಉದ್ವಿಗ್ನತೆಯನ್ನು ಶಮಗೊಳಿಸಿ ಎಂದು ಒತ್ತಿ ಹೇಳಿದ್ದರು. ಜೊತೆಗೆ ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿ ಎಂದು ಪಾಕಿಸ್ತಾನಕ್ಕೆ ತಾಕೀತು ಮಾಡಿದ್ದರು.
ಇಂದು ಬೆಳಗ್ಗೆ ಮತ್ತೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಹಾಗೂ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಾತುಕತೆ ನಡೆಸಿದ್ದರು. ಆಗ ಭಾರತ ದಾಳಿ ನಿಲ್ಲಿಸಿದರೆ ಪಾಕಿಸ್ತಾನವೂ ದಾಳಿ ಮಾಡುವುದಿಲ್ಲ ಎಂದು ಮುನೀರ್ ಹೇಳಿದ್ದರು. ಈಗ ಉಭಯ ದೇಶಗಳ ಮಧ್ಯದ ಯುದ್ಧ ನಿಂತಿದೆ.
ಪಾಕ್ ದಾಳಿಗೆ ಭಾರತ ತೀವ್ರ ಉತ್ತರ ನೀಡುತ್ತಿದ್ದು, ಯುದ್ಧ ಕಾರ್ಮೋಡ ಆವರಿಸಿದ್ದರಿಂದ ಇದೀಗ ಕದನವಿರಮಾನವನ್ನು ಉಭಯ ರಾಷ್ಟ್ರಗಳು ಶಾಂತಿ ನೆಲೆಸಲು ಒಪ್ಪಿಗೆ ಸೂಚಿಸಿವೆ ಎಂದು ಟ್ರಂಪ್ ಖಚಿತಪಡಿಸಿದ್ದಾರೆ.






