ಭಾರತ-ಪಾಕಿಸ್ತಾನ ಮಧ್ಯೆ ಮಧ್ಯಸ್ಥಿಕೆ ಮಾಡಿಸಿದ್ದು ಅಂದ್ರು. ಬಳಿಕ ಅಣ್ವಸ್ತ್ರ ದಾಳಿಯನ್ನು ತಡೆದಿದ್ದೇ ನಾವು ಅಂತ ಬಿಲ್ಡಪ್ ಕೊಟ್ಟರು.

ಮೊನ್ನೆ ನಾವು ಮಧ್ಯಸ್ಥಿಕೆ ಮಾಡಿಸಿಲ್ಲ ಎಂದು ಯೂಟರ್ನ್ ಹೊಡೆದರು. ಈಗ ಅಣ್ವಸ್ತ್ರ ದಾಳಿಯನ್ನು ತಡೆದಿದ್ದೇ ನಾವು ಅಂತ ಮತ್ತೆ ಬಿಲ್ಡಪ್ ಕೊಟ್ಟಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ತಡೆದು ಕದನ ವಿರಾಮ ಜಾತಿಗೆ ತರುವಲ್ಲಿ ತಾವು ಯಶಸ್ವಿಯಾಗಿರುವುದಾಗಿ ಹೇಳಿಕೊಂಡಿದ್ದ ಡೊನಾಲ್ಡ್ ಟ್ರಂಪ್ ಇದೀಗ ಮತ್ತೆ ಅದೇ ವಿಚಾರವನ್ನು ಪುನರುಚ್ಚರಿಸಿದ್ದಾರೆ. ಆ ಮೂಲಕ ಮತ್ತೋಮೆ ಕ್ರೆಡಿಟ್ ತಮ್ಮದಾಗಿಸಿಕೊಳ್ಳೋ ಪ್ರಯತ್ನ ಮಾಡಿದ್ದಾರೆ.

ಹೌದು ಫಾಕ್ಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ, ಭಾರತ- ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಕುರಿತು ಟ್ರಂಪ್ ಮಾತನಾಡಿದ್ದು, ಭಾರತ-ಪಾಕಿಸ್ತಾನ ಮಿಸೈಲ್ ವ್ಯಾಪಾರ ಮಾಡುವುದು ಬೇಡ. ಅದರ ಬದಲಿಗೆ ಭಾರತ-ಪಾಕ್ ನಾಯಕರು ಜೊತೆಯಾಗಿ ಡಿನ್ನರ್ ಮಾಡಿದರೆ ಎರಡು ದೇಶಗಳ ನಡುವಿನ ಉದ್ವಿಗ್ನತೆ ಕಡಿಮೆಯಾಗಬಹುದು. ಆದರೆ ಉಭಯ ದೇಶಗಳು ಡಿನ್ನರ್ ಅಂತೂ ಮಾಡುತ್ತಿಲ್ಲ. ನಾವೇ ಮಧ್ಯ ಪ್ರವೇಶಿಸಿ ಭಾರತ-ಪಾಕ್ ನಡುವೆ ನ್ಯೂಕ್ಲಿಯರ್ ವಾರ್ ತಪ್ಪಿಸಿದ್ದೇವೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಎರಡೂ ದೇಶಗಳ ನಡುವಿನ ಪರಿಸ್ಥಿತಿ ಬಗ್ಗೆ ಮಾತನಾಡಿದ ಟ್ರಂಪ್, ‘ನಾವು ಮಧ್ಯಸ್ಥಿಕೆ ವಹಿಸದಿದ್ದರೆ ಮುಂದಿನ ಹಂತ ಅದೇ ಆಗುತ್ತಿತ್ತು. ಎರಡೂ ದೇಶಗಳ ಬಳಿ ಹೆಚ್ಚು ಕ್ಷಿಪಣಿಗಳಿವೆ, ಮುಂದಿನ ಹಂತ ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಅದುವೇ N’ ಎಂದರು. ಆನಂತರ ‘N ಪದದ ಅರ್ಥ ನಿಮಗೆ ಗೊತ್ತಾ’? ಎಂದು ನಿರೂಪಕರನ್ನು ಟ್ರಂಪ್ ಕೇಳಿದರು, ಅದಕ್ಕೆ ಆಂಖರ್‌ n ಎಂದರೆ ನ್ಯೂಕ್ಲಿಯರ್‌ ಅರ್ಥಾತ್ ‘ಪರಮಾಣು’ ಎಂದು ಉತ್ತರಿಸಿದರು.

ಹೀಗೆ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್‌ ಭಾರತ ಮತ್ತು ಪಾಕ್‌ ನಡುವೆ ಸಂಭವಿಸಬಹುದಾಗಿದ್ದ ಪರಮಾಣು ಯುದ್ಧವನ್ನು ತಾವೇ ನಿಲ್ಲಿಸಿದ್ದು ಎಂದು ಹೇಳಿ ಬೀಗಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!