
ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಅಬ್ದುಲ್ ರಹಿಮಾನ್ ಅವರ ನಿವಾಸಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.ಈ ವೇಳೆ ಇನಾಯತ್ ಅಲಿ ಅವರು ವೈಯ್ಯಕ್ತಿಕ ನೆಲೆಯಲ್ಲಿ 5ಲಕ್ಷ ರೂ.
ಪರಿಹಾರ ಧನದ ಚೆಕನ್ನು ಅಬ್ದುಲ್ ರಹಿಮಾನ್ ಅವರ ತಂದೆಗೆ ಹಸ್ತಾಂತರಿಸಿದರು. ಜೊತೆಗೆ ಅವರ ಇಬ್ಬರೂ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳುವುದಾಗಿ ನುಡಿದರು.






