ಪುತ್ತೂರು, ಜೂ. ೧೪ : ಶ್ರೀ ಮಹಾಲಿಂಗೇಶ್ವರ ದೇವಾಲ️ಯದ ವಠಾರದಲ್ಲಿರುವ ಅಯ್ಯಪ್ಪ ಗುಡಿ, ನವಗ್ರಹ ಗುಡಿ, ನಾಗನ ಸಾನಿಧ್ಯವನ್ನು ಸ್ಥಳಾಂತರಗೊಳಿಸುವ ಬಗ್ಗೆ ದೈವಜ್ನರ ಮೂಲ️ಕ ಪ್ರಶ್ನಾಚಿಂತನೆ ಇರಿಸಿ ಆ ಪ್ರಕಾರ ತೀರ್ಮಾನ ಕೈಗೊಳ್ಳಲ️Ä ನಿರ್ಧರಿಸಲಾಗಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲ️ಯದ ಅಬಿ️üವೃದ್ಧಿ ಸಂಬAಽಸಿ ಶನಿವಾರ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆದ ಸಭೆ ನಡೆಯಿತು. ಅಯ್ಯಪ್ಪ ಗುಡಿ ಇರುವ ಸ್ಥಳದಲ್ಲಿ ರಥ ನಿಲುಗಡೆ ಆಗಬೇಕು ಅನ್ನುವ ಅಂಶ ಕಂಡು ಬಂದಿದೆ. ಜತೆಗೆ ಅಲ್ಲಿರುವ ನಾಗನ ಸಾನಿಧ್ಯವನ್ನು ದೇವಾಲ️ಯದ ಗದ್ದೆಯಲ್ಲಿರುವ ಮೂಲ️ ನಾಗನ ಸಾನಿಧ್ಯಕ್ಕೆ ಸ್ಥಳಾಂತರಿಸುವಿಕೆಯ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಅಬಿ️üಪ್ರಾಯ ಸಂಗ್ರಹಿಸಿ ಅದರಂತೆ ಮುನ್ನಡೆಯಲ️Ä ತೀರ್ಮಾನಿಸಲಾಯಿತು.

ಜೀರ್ಣದ್ಧಾರ ಸಮಿತಿ
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ದೇವಾಲ️ಯದ ಬ್ರಹ್ಮಕಲ️ಶಕ್ಕೆ ಸಮಯ ಬಂದಿದ್ದು ಅದಕ್ಕಿಂತ ಮೊದಲ️Ä ಮಾಸ್ಟರ್ ಪ್ಲ್ಯಾನ್ ಕಾರ್ಯಗತ ಆಗಬೇಕು. ೨ ವರ್ಷದೊಳಗೆ ಬ್ರಹ್ಮಕಲ️ಶಕ್ಕೆ ಅಣಿಯಾಗಲ️Ä ಜೀರ್ಣೋದ್ಧಾರಕ್ಕೆ ಪೂರಕವಾಗಿ ೨೦ ಜನರ ಸಮಿತಿ ಮಾಡಿದ್ದು ಅದು ಧಾರ್ಮಿಕ ದತ್ತಿ ಇಲಾಖೆಯಲ್ಲಿ ಇದೆ. ಆ ಪಟ್ಟಿಯನ್ನು ಅಂತಿಮಗೊಳಿಸಿ ಸಮಿತಿಯ ಸದಸ್ಯರ ಮನೆಗೆ ಪಟ್ಟಿ ರವಾನೆ ಆಗಬೇಕು. ಇದು ದೇವಾಲ️ಯದ ವ್ಯವಸ್ಥಾಪನ ಸಮಿತಿ ತತ್‌ಕ್ಷಣಕ್ಕೆ ಮಾಡಬೇಕಾದ ಕೆಲ️ಸ. ಜು.೬ ರಂದು ಜೀರ್ಣೋದ್ಧಾರ ಸಮಿತಿ ಸಭೆಯನ್ನು ಕರೆಯಬೇಕು. ಜೀರ್ಣೋದ್ದಾರ ಕಾರ್ಯಕ್ಕಾಗಿ ೨೦ ಕೋ.ರೂ.ಹಣ ಸಂಗ್ರಹಿಸುವ ಅಗತ್ಯ ಇದೆ ಎಂದರು.

ಮಾಸ್ಟರ್ ಪ್ಲ್ಯಾನ್ ತರಿಸಿ
ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಸಂಬAಽಸಿದ ಎಂಜಿನಿಯರ್‌ಗಳು ದೇವಾಲ️ಯಕ್ಕೆ ಬಂದಿದ್ದು ಮಾಸ್ಟರ್ ಪ್ಲ್ಯಾನ್ ಅವರ ಬಳಿ ಇದೆ. ಅಲ್ಲಿಂದ ೧೫ ದಿವಸದೊಳಗೆ ತರಿಸಿ ಆ ಬಳಿಕ ಅದನ್ನು ಸರಕಾರಕ್ಕೆ ಕಳುಹಿಸಬೇಕು. ಈಗಾಗಲೇ ಪ್ರಕ್ರಿಯೆ ತಡವಾಗಿದ್ದು ವ್ಯವಸ್ಥಾಪನ ಸಮಿತಿ ಇದಕ್ಕೆ ವೇಗ ನೀಡಬೇಕು ಎಂದು ಶಾಸಕ ರೈ ಸೂಚಿಸಿದರು.

ಕೆರೆ ಅಭಿವೃದ್ಧಿ ಗೆ ೫.೭೦ ಕೋ.ಅನುದಾನ
ಕೆರೆ ಅಬಿ️üವೃದ್ಧಿಗೆ ಒಟ್ಟು ೫.೭೦ ಕೋ.ರೂ. ಅನುದಾನ ಇದ್ದು  ಮಾದರಿ ಪುಷ್ಕರಿಣಿ ನಿರ್ಮಾಣ ಮಾಡಬೇಕು. ಕೆರೆ ಆಯನ ಸ್ಥಳ ಬಿ️ಟ್ಟು ಉಳಿದೆಡೆ ಕಾರಂಜಿ ನಿರ್ಮಾಣ ಆಗಬೇಕು. ಕೆರೆ ಸುತ್ತಲಿನ ಇಡೀ ಪರಿಸರ ಸಮತ್ತಟ್ಟು ಮಾಡಿದ್ದು ಅಲ್ಲಿ ಗ್ರಾನೈಟ್ ಹಾಸಬೇಕು. ಹರಿಕಥೆ, ಭಜನೆ ಸಹಿತ ವಿವಿಧ ಚಟುವಟಿಕೆಗಳು ಅಲ್ಲಿ ನಡೆಯಬೇಕು ಎಂದು ಸಭೆಯಲ್ಲಿ ಅಬಿ️üಪ್ರಾಯ ವ್ಯಕ್ತವಾಯಿತು.

೧೬ ಕೋ.ರೂ.ವೆಚ್ಚದಲ್ಲಿ ಡ್ರೆÊನೇಜ್ ನಿರ್ಮಾಣ ಆಗಲಿದ್ದು ಇದಕೋಸ್ಕರ ಜಿಡೆಕಲ️Ä್ಲ ಬಳಿ ಮುಖ್ಯ ವೆಟ್ ನಿರ್ಮಾಣವಾಗಲಿದೆ. ಇನ್ನೊಂದೆಡೆ ದೇವಾಲ️ಯದ ಶಿವನ ಮೂರ್ತಿ ಇರುವ ಜಾಗದಲ್ಲಿ ಖಾಸಗಿ ಜಾಗ ಖರೀದಿಸಿ ವೆಟ್‌ವೆಲ್ ನಿರ್ಮಾಣ ಮಾಡಲ️Ä ಜಾಗ ಖರೀದಿ, ಆ ಜಾಗ ಸೂಕ್ತವೇ ಎನ್ನುವ ಬಗ್ಗೆ ತೀರ್ಮಾನ ಮಾಡಲ️Ä ಸಭೆ ನಿರ್ಧರಿಸಿತ್ತು.

ಶ್ಮಶಾನ ಬಳಿ ಜಾಗ ಖರೀದಿ : ಚರ್ಚೆ
ಮಡಿವಾಳಕಟ್ಟೆ ಶ್ಮಶಾನ ಸಮೀಪ ಖಾಸಗಿ ಜಾಗ ಇದ್ದು ಅದರ ಖರೀದಿಗೆ ಮಾಲ️ಕರ ಜತೆ ಚರ್ಚಿಸುವಂತೆ ಸಭೆಯಲ್ಲಿ ಶಾಸಕರು ಸಲ️ಹೆ ನೀಡಿದರು. ವಸತಿ ಗೃಹಕ್ಕೆ ನಿರ್ಮಾಣಕ್ಕೆ ಸಂಬAಽಸಿ ಜಾಗ ಪಡೆಯಲ️Ä ಸೂಚನೆ ನೀಡಲಾಯಿತು.

೧೦೦ ರ ವೇಗದಲ್ಲಿ ಕೆಲ️ಸ ಮಾಡಿ
ದೇವಾಲ️ಯದಲ್ಲಿ ಅಬಿ️üವೃದ್ಧಿಗೆ ಸಂಬAಽಸಿ ಹಲ️ವು ಸಭೆ ನಡೆದಿದೆ. ಇನ್ನೂ ಕೂಡ ಕಾರ್ಯಾರಂಭ ಆಗಿಲ️್ಲ. ವ್ಯವಸ್ಥಾಪನ ಸಮಿತಿ ಇದಕ್ಕೆ ಸಂಬAಽಸಿದ ಪ್ರಕ್ರಿಯೆಗಳಿಗೆ ವೇಗ ನೀಡಬೇಕು. ೧೦೦ ರ ವೇಗದಲ್ಲಿ ಕೆಲ️ಸ ಆಗಬೇಕು. ಸುಮ್ಮನೆ ಸಮಿತಿ ರಚಿಸಿ ದಿನ ದೂಡುತ್ತಿದ್ದಾರೆ ಎನ್ನುವ ಭಾವನೆ ಭಕ್ತರದಲ್ಲಿ ಬರಬಾರದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಈ ಸಂದರ್ಭದಲ್ಲಿ ಪುಡಾ ಅಧ್ಯಕ್ಷ ಅಮಲ️ ರಾಮಚಂದ್ರ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲ️ಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ️ ರೈ, ವಿನಯ ಸುವರ್ಣ, ನಳಿನಿ ಶೆಟ್ಟಿ, ಕೃಷ್ಣವೇಣಿ, ಸುಭಾಷ್ ರೈ, ಈಶ್ವರ್ ಬೆಡೆಕರ್, ಅರ್ಚಕ ವಸಂತ ಕುಮಾರ್ ಕೆದಿಲಾಯ, ಪುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!