ಹಿಂಡನ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾದ (IX 1511) ವಿಮಾನದಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದಾಗಿ ಟೇಕಾಫ್ ಅನ್ನು ಸ್ಥಗಿತಗೊಳಿಸಲಾಗಿದೆ.

ಗಾಜಿಯಾಬಾದ್‌ನ ಹಿಂಡನ್ ಏರ್ಪೋರ್ಟ್ದಿಂದ ಕೋಲ್ಕತ್ತಾಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದಕ್ಕೆ ಟೇಕಾಫ್ ಆಗಲಿಲ್ಲ ಎಂದು ವರದಿಯಾಗಿದೆ.

ವಿಮಾನವು ಟೇಕಾಫ್ಗೆ ಸಿದ್ಧತೆ ನಡೆಸುತ್ತಿದ್ದಾಗ ಹಠಾತ್ ತಾಂತ್ರಿಕ ದೋಷ ಪತ್ತೆಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಟೇಕಾಫ್ ಮುಂದೂಡಲಾಯಿತು.

ಏರ್ ಇಂಡಿಯಾ ವಿಮಾನದ ಸಮಸ್ಯೆ ಬಗೆಹರಿಸುತ್ತಿರೋದ್ರಿಂದ ವಿಮಾನವು ಸುಮಾರು ಒಂದು ಗಂಟೆ ರನ್‌ವೇಯಲ್ಲಿ ನಿಂತಿದೆ. ಇತ್ತೀಚೆಗೆ ಏರ್ ಇಂಡಿಯಾ ವಿಮಾನ ಪತನವು ಇಡೀ ಜಗತ್ತನ್ನೇ ಮರಗುವಂತೆ ಮಾಡಿದ್ದು ಗೊತ್ತೇ ಇದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!