ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಹಿಂದೂ ಪಕ್ಷ ಕಟ್ಟಿದರೆ ಸ್ವಾಗತಿಸುತ್ತೇನೆ ಎಂದು ವಿಶ್ವ ಹಿಂದೂ ಪರಿಷತ್ ನಾಯಕ ಡಾ|ಪ್ರವೀಣಬಾಯ್ ತೊಗಾಡಿಯಾ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾವುದೇ ಹಿಂದೂಪರ ಸಂಘಟನೆಗೆ ನಾವು ವಿರೋಧ ಮಾಡಲ್ಲ.ಜಗಳವೂ ಮಾಡಲ್ಲ. ಯತ್ನಾಳ ಹೊಸ ಸಂಘಟನೆ ಮಾಡಿದರೆ ಅವರು ನನ್ನವರು. ಅವರ ಬಗ್ಗೆ ನನ್ನ ಮನದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ನಾನು ಪಕ್ಷ ನೋಡೋದಿಲ್ಲ. ಅಮಿತ್ ಬಾಯಿ(ಅಮಿತ್ ಶಾ) ನನ್ನ ಮನೆಗೆ ವಾರಕ್ಕೆ ಎರಡು ಬಾರಿ ಬರುತ್ತಿದ್ದರು ಎಂದರು.














