ರೌಡಿಶೀಟರ್ ಜತೆ ಪತ್ನಿ ಸಂಬಂಧ(Relationship) ಹೊಂದಿದ್ದಾಳೆ ಎಂದು ಆಕೆಯ ಪತಿಯೇ ಆಕೆಯನ್ನು ಹತ್ಯೆ ಮಾಡಿದ ಘಟನೆ ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ತಿರುನಲ್ವೇಲಿ ಪೆದ್ದ ಕಾಲೋನಿಯ ಕೋಮತಿ (28) ಮೃತೆ. ಈಕೆ ತಿರುನಲ್ವೇಲಿ 26ನೇ ವಾರ್ಡ್ನ ಪುರಸಭೆ ಕಾರ್ಪೋರೇಟರ್ ಆಗಿದ್ದರು.

ಅಲ್ಲದೆ, ಕೊಲೆಗೈದ ಆರೋಪಿ ಪತಿ ಸ್ಟೀಫನ್ ರಾಜ್(38) ಕೂಡ ಪುರಸಭೆಯ ಕಾರ್ಯದರ್ಶಿಯಾಗಿದ್ದಾರೆ. ಆರೋಪಿ ಸ್ಟೀಫನ್ ರಾಜ್ ಮತ್ತು ಈತನ ತಾಯಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ರೌಡಿಶೀಟರ್ ಪರಿಚಯ

ಕೋಮತಿ ಮತ್ತು ಸ್ಟೀಫನ್ರಾಜ್ 2015ರಲ್ಲಿ ಲವ್ ಮ್ಯಾರೇಜ್ ಆಗಿದ್ದಾರೆ. ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಕೋಮತಿಗೆ ಕೆಲ ದಿನಗಳಿಂದೆ ಇಲ್ಲಿನ ರಾಮದಾಸಪುರಂನ ರೌಡಿಶೀಟರ್ ಮೋಸಸ್ದೇವ ಜತೆ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿದೆ. ಇದು ಆಕ್ರಮ ಸಂಬಂಧಕ್ಕೆ ಕಾರಣವಾಗಿದೆ. ಈ ಬಗ್ಗೆ ಕೆಲ ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ಏರ್ಪಟ್ಟಿದೆ. ಈ ಹಿಂದೆ ಗಂಡ ಈ ಸಂಬಂಧ ಬಿಡುವಂತೆ ವಾರ್ನಿಂಗ್ ಮಾಡಿದ್ದಾನೆ ಎನ್ನಲಾಗಿದೆ. ಇದಕ್ಕೂ ಮೀರಿ ಆಕೆ ಮಕ್ಕಳನ್ನು ಮತ್ತು ಪತಿಯನ್ನು ಬಿಟ್ಟು ಓಡಿ ಹೊಗಲು ಸಿದ್ಧಳಾಗಿದ್ದಳು. ಹೀಗಾಗಿ, ಕೋಪಗೊಂಡ ಸ್ಟೀಫನ್ರಾಜ್ ಕತ್ತಿಯಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!