ಪುತ್ತೂರು: ಪುತ್ತೂರಿನ ಹೆಸರಾಂತ ಚಿನ್ನಾಭರಣ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲ‌ರ್ಸ್‌ನಲ್ಲಿ ಜುಲೈ 12ರಂದು ಆರಂಭಗೊಂಡಿರುವ **’ಆಟಿ ಸೇಲ್’**‌ಗೆ ಗ್ರಾಹಕರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, ಈ ವಿಶೇಷ ಕೊಡುಗೆಗಳು ಜುಲೈ 25ರವರೆಗೆ ಮಾತ್ರ ಲಭ್ಯವಿರಲಿದೆ ಎಂದು ಮಳಿಗೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸೇಲ್ ಸಂದರ್ಭದಲ್ಲಿ ಗ್ರಾಹಕರಿಗೆ ಕೆಳಗಿನ ಆಕರ್ಷಕ ರಿಯಾಯಿತಿಗಳನ್ನು ನೀಡಲಾಗಿದೆ:

ಚಿನ್ನಾಭರಣಗಳ ಖರೀದಿಗೆ ಪ್ರತಿ ಗ್ರಾಂಗೆ ರೂ. 300 ನೇರ ರಿಯಾಯಿತಿ

ಪ್ರತಿ 1 ಕ್ಯಾರೆಟ್ ಗ್ಲೋ ವಜ್ರಾಭರಣಗಳಿಗೆ ರೂ. 5,000 ನೇರ ರಿಯಾಯಿತಿ

ಬೆಳ್ಳಿಯ ಆಭರಣಗಳಿಗೆ ಪ್ರತಿ ಕೆ.ಜಿ.ಗೆ ರೂ. 3,000 ನೇರ ರಿಯಾಯಿತಿ


ಜಿಲ್ಲೆಯ ಅತಿದೊಡ್ಡ ಚಿನ್ನಾಭರಣ ಮಳಿಗೆಯಾದ ಜಿ.ಎಲ್. ಆಚಾರ್ಯ ಜ್ಯುವೆಲ್ಲ‌ರ್ಸ್‌ನಲ್ಲಿ 25,700ಕ್ಕೂ ಮಿಕ್ಕಿ ವಿಭಿನ್ನ ವಿನ್ಯಾಸಗಳ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹ ಲಭ್ಯವಿದೆ. ಎಫ್ ವಿವಿಎಸ್ ಶ್ರೇಣಿಯ ನೈಸರ್ಗಿಕ ವಜ್ರಾಭರಣಗಳು, ಆ್ಯಂಟಿಕ್ ವಿನ್ಯಾಸದ ವಿಶೇಷ ಕಲಕ್ಷನ್‌ಗಳು, ಅನ್‌ಕಟ್ ಡೈಮಂಡ್ಸ್ ಮತ್ತು ಅಮೂಲ್ಯ ಹರಳುಗಳಿಂದ ವಿನ್ಯಾಸಗೊಳಿಸಿದ ಆಭರಣಗಳು ಗ್ರಾಹಕರ ಗಮನ ಸೆಳೆಯುತ್ತಿವೆ.

1957ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಇಂದು ವಿಶ್ವಾಸ, ಪರಿಶುದ್ಧತೆ, ವಿನ್ಯಾಸ ಹಾಗೂ ಗ್ರಾಹಕ ಸೇವೆಗಾಗಿ ಪ್ರಖ್ಯಾತಿಯನ್ನಾಳುತ್ತಿದೆ. ಪುತ್ತೂರಿನೊಂದಿಗೆ ಸುಳ್ಯ, ಮೂಡಬಿದ್ರಿ, ಹಾಸನ ಹಾಗೂ ಕುಶಾಲನಗರದಲ್ಲಿ ಮಳಿಗೆಗಳನ್ನು ಹೊಂದಿರುವ ಈ ಸಂಸ್ಥೆಯ ಆಟಿ ಸೇಲ್ ಆಫರ್ ಪುತ್ತೂರು, ಸುಳ್ಯ ಮತ್ತು ಮೂಡಬಿದ್ರಿ ಶಾಖೆಗಳಲ್ಲಿ ಮಾತ್ರ ಲಭ್ಯವಿದೆ.

ಅತ್ಯುತ್ತಮ ಪಾರ್ಕಿಂಗ್ ಸೌಲಭ್ಯ, ವಿನೂತನ ವಿನ್ಯಾಸಗಳ ಅಪಾರ ಆಯ್ಕೆ ಹಾಗೂ ವಿಶ್ವಾಸಾರ್ಹ ಸೇವೆ — ಈ ಎಲ್ಲದರಿಂದ ಗ್ರಾಹಕರಿಗೆ ಶಾಪಿಂಗ್‌ ಹೊಸ ಅನುಭವ ದೊರಕುತ್ತಿದೆ. ಈ ವಿಶಿಷ್ಟ ಕೊಡುಗೆಯ ಸದುಪಯೋಗವನ್ನು ಗ್ರಾಹಕರು ಪಡೆಯುವಂತೆ ಸಂಸ್ಥೆ ಆಹ್ವಾನಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!