ಪುತ್ತೂರು: ಇಲ್ಲಿನ ಕೊಂಬೆಟ್ಟು ಜಿ.ಎಲ್ ಟ್ರೇಡ್ ಸೆಂಟರ್ ನಲ್ಲಿರುವ ಪಶುಪತಿ ಲೈಟ್ಸ್,ಫ್ಯಾನ್ಸ್ , ಇಲೆಕ್ಟ್ರಿಕಲ್ಸ್‌ನಲ್ಲಿ ಜುಲೈ 24 ರಿಂದ 31ರವರೆಗೆ ಜನರೇಟರ್‌ಗಳ ಮಾಹಿತಿ, ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹೋಂಡಾ ಅಮೆರ್ ಎನ್.ಎಸ್.ಎಂ. ಇಂಡಿಯಾ ಹಾಗೂ ಜೀನ್ ಎಕ್ಸ್ ಬ್ರಾಂಡ್‌ಗಳ ಜನರೇಟರ್‌ಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಗ್ರಾಹಕರು ನೇರವಾಗಿ ಮಾಹಿತಿ ಪಡೆದು, ತಕ್ಷಣ ಖರೀದಿಸುವ ವ್ಯವಸ್ಥೆಯೂ ಇದೆ

ಈ ಕಾರ್ಯಕ್ರಮದ ಉದ್ಘಾಟನೆ ಜು 24 ಗುರುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್‌, ಅಮೆರ್ ಎನ್.ಎಸ್.ಎಂ. ಇಂಡಿಯಾದ ರೀಜನಲ್ ಸೇಲ್ಸ್ ಮ್ಯಾನೇಜರ್ ಮಹೇಶ್ ಜೋಶಿ  ಹಾಗೂ ಕುಕ್ಕಿಲ ಎಂಟರ್‌ಪ್ರೈಸಸ್‌ನ ವೆಂಕಟರಮಣ ಭಟ್‌ ಉಪಸ್ಥಿತರಿರುವರು ಎಂದು ಪಶುಪತಿ ಶರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿರಂತರವಾಗಿ ಕಾಡುತ್ತಿರುವ ವಿದ್ಯುತ್ ಕಳಪೆ ಸಮಸ್ಯೆಗೆ ಪರಿಹಾರವಾಗಿ ಜನರೇಟರ್‌ಗಳ ಬಳಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿಯೇ ಈ ಪ್ರದರ್ಶನ ಕೈಗೊಂಡಿದ್ದು, ಕೃಷಿ, ಕೈಗಾರಿಕೆ, ಅಂಗಡಿ-ಮಳಿಗೆ, ಕನ್‌ಸ್ಟ್ರಕ್ಷನ್, ಫ್ಯಾಬ್ರಿಕೇಶನ್ ಹಾಗೂ ಎಲೆಕ್ಟ್ರಿಕಲ್ ವೆಲ್ಡಿಂಗ್ ಕಾರ್ಯಗಳಿಗೆ ಅನುಕೂಲವಾಗುವ ರೀತಿಯಲ್ಲಿ ವಿವಿಧ ಶ್ರೇಣಿಯ ಜನರೇಟರ್‌ಗಳು ಲಭ್ಯವಿವೆ.

ಹೋಂಡಾ ಎಂಜಿನ್ ಹೊಂದಿರುವ ಈ ಜನರೇಟರ್‌ಗಳು ಉತ್ತಮ ಗುಣಮಟ್ಟ, ದೀರ್ಘಕಾಲಿಕ ಸೇವೆ, ಸಮರ್ಥ ಪವರ್ ಬ್ಯಾಕ್‌ಅಪ್, 1 ವರ್ಷದ ವ್ಯಾರೆಂಟಿ ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ಪುತ್ತೂರಿನಲ್ಲಿ ಲಭ್ಯವಿರುವುದು ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!