ರಸ್ತೆಯ ಮೇಲೆ ಕುಸಿದು ಬಿದ್ದ ಮಹಿಳೆಗೆ ಸಿಪಿಆರ್ ನೀಡುವ ಮೂಲಕ ರಕ್ಷಿಸಲು ಪ್ರಯತ್ನಿಸಿದ ಯುವಕನ ವಿರುದ್ಧ ಸ್ಥಳೀಯರು ಲೈಂಗಿಕ ಕಿರುಕುಳ ದೂರು ದಾಖಲಿಸಿರುವ ಆಘಾತಕಾರಿ ಘಟನೆ ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಹೆಂಗ್ಯಾಂಗ್‌ನಲ್ಲಿ ನಡೆದಿದೆ.

ಸ್ಥಳೀಯರು ನೀಡಿದ ದೂರಿನ ಆಧಾರದ ಮೇಲೆ 42 ವರ್ಷದ ವ್ಯಕ್ತಿಯ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂದು ವರದಿಯಾಗಿದೆ.

ಸಿಪಿಆರ್ ನೀಡುವಾಗ ಮಹಿಳೆಯನ್ನು ಕೆಟ್ಟ ರೀತಿಯಲ್ಲಿ ಮುಟ್ಟಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ರಸ್ತೆಯಲ್ಲಿ ಕುಸಿದು ಬಿದ್ದ ನಂತರ, ಅವರನ್ನು ಗಮನಿಸುತ್ತಿದ್ದ ಮಹಿಳಾ ವೈದ್ಯರು ಬಂದು ಆ ಮಹಿಳೆಗೆ ಸಿಪಿಆರ್ ನೀಡಿದರು. ಆ ಕ್ಷಣ ಚೇತರಿಸಿಕೊಂಡ ಮಹಿಳೆ, ಸ್ವಲ್ಪ ಸಮಯದ ಬಳಿಕ ಮತ್ತೆ ಸುಸ್ತಾಗಿ ಮತ್ತೆ ಕುಸಿದುಬಿದ್ದರು. ಈ ವೇಳೆ ಸಹಾಯಕ್ಕಾಗಿ ಅಲ್ಲಿದ್ದರು ಕರೆದಾಗ, ಪ್ಯಾನ್ ಎಂಬ ವ್ಯಕ್ತಿ ಮುಂದೆ ಬಂದು, ತಾನೊಬ್ಬ ಕ್ಲಿನಿಕಲ್ ಮೆಡಿಸಿನ್‌ನಲ್ಲಿ ಪದವಿ ಮತ್ತು ಸಿಪಿಆರ್ ತರಬೇತಿಯನ್ನು ಹೊಂದಿದ್ದೇನೆ ಎಂದು ಹೇಳಿಕೊಂಡು, ಮಹಿಳೆಗೆ ಸುಮಾರು ಹತ್ತು ನಿಮಿಷಗಳ ಕಾಲ ಸಿಪಿಆರ್ ನೀಡಿದನು.

ಆಂಬ್ಯುಲೆನ್ಸ್ ಬರುವ ಮೊದಲೇ, ಮಹಿಳೆಯ ನಾಡಿಮಿಡಿತ ಸಾಮಾನ್ಯ ಸ್ಥಿತಿಗೆ ಮರಳಿತು ಮತ್ತು ಆಕೆ ಕಣ್ಣುಗಳನ್ನು ತೆರೆದಳು. ನಂತರ, ಹೆಚ್ಚಿನ ಪರೀಕ್ಷೆಗಾಗಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇತ್ತ ಪ್ಯಾನ್ ಎಂಬ ವ್ಯಕ್ತಿ ಸಿಪಿಆರ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತಕ್ಷಣ ವೈರಲ್ ಆಯಿತು. ಆ ವಿಡಿಯೋ ಪ್ಯಾನ್ ವಿರುದ್ಧ ದೂರುಗಳಿಗೆ ಕಾರಣವಾಯಿತು. ತನ್ನ ವಿರುದ್ಧ ಟೀಕೆಗಳು ತೀವ್ರಗೊಳ್ಳುತ್ತಿದ್ದಂತೆ, ಪ್ಯಾನ್ ಜಾಲತಾಣದಲ್ಲಿ ಸ್ಪಷ್ಟನೆ ಸಹ ನೀಡಿದರು. ಜನರು ತಮ್ಮ ಮೇಲೆ ಈ ರೀತಿ ಆರೋಪ ಮಾಡುತ್ತಾರೆಂದು ತಿಳಿದಿದ್ದರೆ, ಜೀವ ಉಳಿಸಲು ಪ್ರಯತ್ನಿಸುತ್ತಿರಲಿಲ್ಲ ಎಂದು ಪ್ಯಾನ್ ಬೇಸರ ಹೊರಹಾಕಿದ್ದಾರೆ.

ಇದೇ ಸಂದರ್ಭದಲ್ಲಿ ಅನೇಕ ಜನರು ಪ್ಯಾನ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ಯಾನ್‌ ಸಮಯಕ್ಕೆ ಸರಿಯಾಗಿ ಸಿಪಿಆರ್ ಮಾಡಿದ್ದರಿಂದ ಯುವತಿಯ ಜೀವ ಉಳಿಯಿತು ಮತ್ತು ಇತರರು ಸುಮ್ಮನೇ ಪ್ರೇಕ್ಷಕರಾಗಿ ನಿಂತಿದ್ದರು ಎಂಬ ಅನೇಕ ಕಾಮೆಂಟ್‌ಗಳು ಬಂದಿದ್ದು, ಪ್ಯಾನ್ಗೆ ಭಾರಿ ಬೆಂಬಲ ವ್ಯಕ್ತವಾಗಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!