ತನ್ನ ದೇಶದ ಮೇಲೆ ಕಾಂಬೋಡಿಯಾ ದಾಳಿ ನಡೆಸಿದ ಬೆನ್ನಲ್ಲೇ ಥೈಲ್ಯಾಂಡ್ ಮರು ದಾಳಿ ನಡೆಸಿದೆ. ಗುರುವಾರ (ಜು.24) ಥೈಲ್ಯಾಂಡ್ ಏರ್‌ ಸ್ಟ್ರೈಕ್‌ ನಡೆಸಿದ್ದು, ಕಾಂಬೋಡಿಯಾದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ಇದರೊಂದಿಗೆ ನೆರೆಹೊರೆಯ ದೇಶಗಳ ನಡುವಿನ ದೀರ್ಘಕಾಲದ ಗಡಿ ವಿವಾದ ಇದೀಗ ಉಲ್ಬಣವಾಗಿದೆ.

ಎರಡು ದೇಶಗಳು ಮತ್ತು ಲಾವೋಸ್‌ ಗಡಿ ಹಂಚಿಕೊಳ್ಳುವ ಮತ್ತು ಹಲವಾರು ಪ್ರಾಚೀನ ದೇವಾಲಯಗಳಿಗೆ ನೆಲೆಯಾಗಿರುವ ಎಮರಾಲ್ಡ್ ಟ್ರಯಾಂಗಲ್‌ ಎಂಬ ಪ್ರದೇಶದ ಕುರಿತಂತೆ ಬಗ್ಗೆ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ದೇಶಗಳು ಹಲವು ಸಮಯದಿಂದ ಜಗಳವಾಡುತ್ತಿದೆ.

ಈ ಜಗಳ ದಶಕಗಳಿಂದಲೂ ಮುಂದುವರೆದಿದ್ದು, 15 ವರ್ಷಗಳ ಹಿಂದೆ ರಕ್ತಸಿಕ್ತ ಮಿಲಿಟರಿ ಘರ್ಷಣೆಯಾಗಿತ್ತು. ಕಳೆದ ಮೇ ತಿಂಗಳಲ್ಲಿ ಕಾಂಬೋಡಿಯನ್ ಸೈನಿಕನೊಬ್ಬ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದಾಗ ಮತ್ತೆ ಭುಗಿಲೆದ್ದಿದೆ.

ಗುರುವಾರ ಸಂಘರ್ಷ ಭುಗಿಲೆದ್ದಿದ್ದು, ಕಾಂಬೋಡಿಯಾವು ಥೈಲ್ಯಾಂಡ್ ಮೇಲೆ ರಾಕೆಟ್ ಮತ್ತು ಫಿರಂಗಿ ಶೆಲ್‌ಗಳನ್ನು ಹಾರಿಸಿದೆ. ಥಾಯ್ ಸೇನೆಯು ವಾಯುದಾಳಿಗಳನ್ನು ನಡೆಸಲು F-16 ಜೆಟ್‌ಗಳನ್ನು ಬಳಸಿದೆ.

ಉಬೊನ್ ರಟ್ಚಥಾನಿ ಪ್ರಾಂತ್ಯದಿಂದ ಆರು ಜೆಟ್‌ಗಳನ್ನು ನಿಯೋಜಿಸಲಾಗಿದ್ದು, ಎರಡು “ಕಾಂಬೋಡಿಯನ್ ಮಿಲಿಟರಿ ಗುರಿಗಳನ್ನು ಹೊಡೆದುರುಳಿಸಲಾಗಿದೆ” ಎಂದು ಥಾಯ್ ಮಿಲಿಟರಿ ಉಪ ವಕ್ತಾರ ರಿಚಾ ಸುಕ್ಸುವಾನನ್ ಹೇಳಿದ್ದಾರೆ.

‌ಗಡಿ ಭಾಗದ ಮನೆಯೊಂದಕ್ಕೆ ಕಾಂಬೋಡಿಯನ್‌ ಶೆಲ್ ಹೊಡೆದಿದೆ. ಓರ್ವ ನಾಗರಿಕ ಸಾವನ್ನಪ್ಪಿದ್ದಾನೆ ಮತ್ತು ಐದು ವರ್ಷದ ಮಗು ಸೇರಿ ಮೂವರು ಗಾಯಗೊಂಡಿದ್ದಾರೆ ಎಂದು ಥಾಯ್‌ ಪ್ರಧಾನಿ ಕಚೇರಿ ಹೇಳಿದೆ.,

Leave a Reply

Your email address will not be published. Required fields are marked *

Join WhatsApp Group
error: Content is protected !!