ಬೆಳ್ತಂಗಡಿ: ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ದಂಪತಿಗಳು ಹನಿಮೂನ್‌ಗೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಪ್ರತಿಷ್ಠಿತ ಹೋಟೆಲ್‌ಗೆ ಬಂದು ತಂಗಿದ್ದ ವೇಳೆ ಪತಿ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ ಕೃತ್ಯ ನಡೆದಿದೆ.

ಬೆಂಗಳೂರು ರಾಮನಗರ ಜಿಲ್ಲೆಯ ಬಿಡದಿ ತಾಲೂಕಿನ ನಂದಗೋಕುಲ ನಿವಾಸಿ, ಮೂರನೇ ವರ್ಷದ ಕಾನೂನು ವಿದ್ಯಾರ್ಥಿ ವಿಶ್ವನಾಥ್ (24) ಹಾಗೂ ಪತ್ನಿ (22) ಮೇ 22ರಂದು ಮದುವೆಯಾಗಿದ್ದರು. ಜುಲೈ 22ರಂದು ಉಜಿರೆಯ ಹೋಟೆಲ್‌ಗೂ ಬಂದು ತಂಗಿದ್ದರು. ಆ ರಾತ್ರಿ ಕುಡಿದ ಮತ್ತಿನಲ್ಲಿ ಪತ್ನಿಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪವಿದೆ.

ಪತ್ನಿ ಜುಲೈ 23 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಿಶ್ವನಾಥ್ ವಿರುದ್ಧ BNS 109, 115(1), 85 ಮತ್ತು 4 DP (ಕೊಲೆಯತ್ನ, ಕೈಯಿಂದ ಹಲ್ಲೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸ್ ಇನ್ಸ್‌ಪೆಕ್ಟರ್ ಸುಬ್ಬಾಪುರ ಮಠ್ ನೇತೃತ್ವದಲ್ಲಿ ಜುಲೈ 24 ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಧೀಶ ಸಂದೇಶ್.ಕೆ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!