ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂಬ ಹೆಸರು ಪಡೆದ ಗವಿಮಠ ಈಗ ವಿಶಿಷ್ಟ ಕ್ಷಣಕ್ಕೆ ಸಾಕ್ಷಿಯಾಗಿದೆ. ಯಲಬುರ್ಗಾ ತಾಲೂಕಿನ ಕುದರಿಮೋತಿ ಗ್ರಾಮದ ಹಸೀನಾ ಬೇಗಂ ಎಂಬ ಮುಸ್ಲಿಂ ಮಹಿಳೆ ಕಳೆದ ಎಂಟು ದಿನಗಳಿಂದ ಮಠದಲ್ಲಿ ಪ್ರತಿದಿನ ಒಂದು ಗಂಟೆ ಧ್ಯಾನ ಮಾಡುತ್ತಿದ್ದಾರೆ.

“ನಾನು 13 ವರ್ಷಗಳಿಂದ ಗವಿಮಠದ ಶ್ರೀಗಳನ್ನು ನಂಬುತ್ತಿದ್ದೇನೆ. ಮನಸ್ಸಿಗೆ ನೆಮ್ಮದಿ ಸಿಗಲಿ ಎಂಬ ಕಾರಣಕ್ಕೆ ಧ್ಯಾನ ಮಾಡುತ್ತಿದ್ದೇನೆ” ಎಂದು ಹಸೀನಾ ಬೇಗಂ ಹೇಳಿದ್ದಾರೆ.

ಗವಿಮಠದ ಆವರಣದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಧ್ಯಾನ ಮಾಡುತ್ತಿರುವುದು ಮೊದಲು ಎಂಬುದು ವಿಶೇಷ. “ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ, ಎಲ್ಲ ದೇವರು ಒಂದೇ ಎಂಬ ನಂಬಿಕೆ ಇದೆ” ಎಂಬ ಹಸೀನಾ ಮಾತುಗಳು ಧರ್ಮ ಮೀರಿದ ಭಾವನೆಗೆ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!