ಬೆಳ್ತಂಗಡಿ, ಜು.26:ಹಲವಾರು ಮೃತದೇಹಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌.ಐ.ಟಿ ತನಿಖೆ ಮುಂದುವರಿದಿದ್ದು, ಮಹತ್ವದ ಬೆಳವಣಿಗೆ ಸಂಭವಿಸಿದೆ. ಪ್ರಕರಣದ ದೂರುದಾರ ವ್ಯಕ್ತಿ, ಎರಡು ಮಂದಿ ವಕೀಲರೊಂದಿಗೆ ಜುಲೈ 26 ರಂದು ಮಂಗಳೂರು ಐಬಿಗೆ ಬಂದು ಎಸ್‌.ಐ.ಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ವಿಶೇಷತೆಯೆಂದರೆ, ದೂರುದಾರನು ತನ್ನ ಮುಖದ ಮೇಲೆ ಕಪ್ಪು ಬಣ್ಣದ ಕವರ್ ಹಾಕಿಕೊಂಡು ತನಿಖಾಧಿಕಾರಿಗಳ ಮುಂದೆ ಕಾಣಿಸಿಕೊಂಡಿದ್ದಾನೆ.

ಈ ಸಂದರ್ಭದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಪ್ರಕರಣ ಸಂಬಂಧ ಬಹುಮುಖ್ಯ ಮಾಹಿತಿಗಳನ್ನು ಎಸ್‌.ಐ.ಟಿ ಅಧಿಕಾರಿಗಳು ದಾಖಲೆಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್‌.ಐ.ಟಿ ತಂಡ ಈಗ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಸಂಬಂಧಿತ ದಾಖಲೆಗಳನ್ನು ಪರಿಶೀಲಿಸುತ್ತಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!