ಪುತ್ತೂರು: ದರ್ಬೆಯ ಬುಶ್ರಾ ಟವರ್ಸ್‌ನಲ್ಲಿ ಇರುವ ಪ್ರತಿಷ್ಠಿತ ನಯಾ ಚಪ್ಪಲ್ ಬಜಾರ್ ಪ್ರಥಮ ಬಾರಿಗೆ ಸ್ವಾತಂತ್ರೋತ್ಸವದ ಅಂಗವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿನೂತನ ರಸ ಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದೆ. ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಇದು ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವಾಗಿದೆ.

ಸ್ಪರ್ಧೆಯಲ್ಲಿನ ಹನ್ನೆರಡು ಪ್ರಶ್ನೆಗಳಿಗೆ ಸ್ಪರ್ಧಿಗಳು ಅಂಚೆ ಮೂಲಕ ಉತ್ತರಿಸಬೇಕಿದ್ದು, ಆ. 13, 2025ರ ಒಳಗೆ ಉತ್ತರ ತಲುಪಬೇಕು. ಪ್ರಥಮ, ದ್ವಿತೀಯ, ತೃತೀಯ ಸೇರಿದಂತೆ 7 ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಆ. 15, 2025ರಂದು ದರ್ಬೆ ನಯಾ ಚಪ್ಪಲ್ ಬಜಾರ್ ಶೋರೂಂನಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಸಮಾನ ಅಂಕ ಪಡೆದವರಲ್ಲಿ ವಿಜೇತರನ್ನು ಡ್ರಾ ಮೂಲಕ ನಿರ್ಧರಿಸಲಾಗುವುದು. ಆ. 14, 2025ರಂದು ವಿಜೇತರಿಗೆ ಮಾಹಿತಿ ನೀಡಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು, ತರಗತಿ, ಶಾಲೆ ಮತ್ತು ಮೊಬೈಲ್ ಸಂಖ್ಯೆಯನ್ನು ತಪ್ಪದೆ ನಮೂದಿಸಬೇಕು.


ಸ್ಪರ್ಧೆಯಲ್ಲಿನ ಹನ್ನೆರಡು ಪ್ರಶ್ನೆಗಳು ಹೀಗಿವೆ:

1. ಭಾರತದ ಯಾವ ಪ್ರಧಾನ ಮಂತ್ರಿಗಳ ಕಾಲದಲ್ಲಿ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಲಾಯಿತು?


2. ಸತ್ಯದೊಂದಿಗೆ ನನ್ನ ಪ್ರಯೋಗಗಳು (Experience With Truth) ಪುಸ್ತಕವನ್ನು ಬರೆದವರು ಯಾರು?


3. 1965ರ ಭಾರತ–ಪಾಕಿಸ್ತಾನ ಯುದ್ಧದ ಸಂದರ್ಭ ಭಾರತದ ಪ್ರಧಾನ ಮಂತ್ರಿ ಯಾರು?


4. ಮಹಾತ್ಮ ಗಾಂಧೀಜಿಯವರನ್ನು “ರಾಷ್ಟ್ರಪಿತ” (Father of the Nation) ಎಂದು ಮೊಟ್ಟ ಮೊದಲಾಗಿ ಯಾರು ಕರೆದರು?


5. 1971ರ ಬಾಂಗ್ಲಾದೇಶಕ್ಕಾಗಿ ನಡೆದ ಯುದ್ಧದಲ್ಲಿ ಭಾರತದ ಫೀಲ್ಡ್ ಮಾರ್ಷಲ್ ಆಗಿ ಸೇವೆ ಸಲ್ಲಿಸಿದವರು ಯಾರು?


6. ಜಲಿಯಾನ್ ವಾಲಾ ಹತ್ಯಾಕಾಂಡ ಯಾವ ವರ್ಷ ನಡೆಯಿತು?


7. ಆಜಾದ್ ಹಿಂದ್ ಫೌಜ್‌ನ ಸ್ಥಾಪಕ ಯಾರು?


8. “ವಂದೇ ಮಾತರಂ” ರಾಷ್ಟ್ರಗೀತೆಯನ್ನು ಯಾವ ಕಾದಂಬರಿಯಿಂದ ತೆಗೆದುಕೊಳ್ಳಲಾಗಿದೆ?


9. ರಾಣಿ ಚೆನ್ನಮ್ಮ ಯಾವ ರಾಜವಂಶಕ್ಕೆ ಸೇರಿದವರು?


10. ಸೈಮನ್ ಕಮಿಷನ್ ಭಾರತಕ್ಕೆ ಯಾವ ವರ್ಷ ಬಂದಿತು?


11. ಗಾಂಧೀಜಿಯವರ ಕಿರಿಯ ತಂಗಿ ಎಂದು ಕರೆಯಲ್ಪಡುವ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರ್ತಿ ಯಾರು?


12. ನಯಾ ಚಪ್ಪಲ್ ಬಜಾರ್‌ನಲ್ಲಿ ಪಾದರಕ್ಷೆಗಳಲ್ಲದೆ ಬೇರೆ ಯಾವ ವಸ್ತುಗಳು ಮಾರಾಟ ಮಾಡುತ್ತಾರೆ?

Leave a Reply

Your email address will not be published. Required fields are marked *

Join WhatsApp Group
error: Content is protected !!