ಮೂಡಬಿದ್ರೆ:  ಕಾರ್ಯಾಚರಣೆ ನಡೆಸಿದ ಮೂಡಬಿದ್ರೆ ಪೊಲೀಸ್‌ರು ಕಳೆದುಹೋದ ಸುಮಾರು ₹10 ಲಕ್ಷ ಮೌಲ್ಯದ ಚಿನ್ನ ಹಾಗೂ ಪರ್ಸ್ ನ್ನು ಕೇವಲ ಎರಡು ದಿನಗಳಲ್ಲಿ ಪತ್ತೆ ಹಚ್ಚಿದ್ದಾರೆ.

08.08.2025 ರಂದು ಪಡು ಮಾರ್ನಾಡು ಗ್ರಾಮದ ಧರ್ಮಪಾಲ ಬಲ್ಲಾಳರ ಪತ್ನಿ ವಿಜಯ ರವರು ಕುಪ್ಪೆ ಪದವಿನಲ್ಲಿ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಹಿಂತಿರುಗುವ ಸಂದರ್ಭದಲ್ಲಿ ಮಧ್ಯಾಹ್ನ 2.00 ಗಂಟೆಗೆ ಮೂಡಬಿದ್ರೆ ಪೇಟೆಯಲ್ಲಿ ಎರಡು ಬಳೆ, ಚಿನ್ನದ ಸರ (ಒಟ್ಟು 9 ಪವನ್) ಹಾಗೂ ಪರ್ಸ್ ಕಳೆದುಕೊಂಡಿದ್ದರು. ಈ ಬಗ್ಗೆ ಕೂಡಲೇ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದೂರಿನ ಆಧಾರದ ಮೇಲೆ, ಪೊಲೀಸ್ ನಿರೀಕ್ಷಕ ಶ್ರೀ ಸಂದೇಶ್ ಪಿ.ಜಿ. ಅವರ ನೇತೃತ್ವದಲ್ಲಿ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಮಹಮದ್ ಹುಸೇನ್, ಮಹಮದ್ ಇಕ್ಬಾಲ್, ಅಖಿಲ್ ಅಹಮದ್, ನಾಗರಾಜ ಲಮಾಣಿ ಹಾಗೂ ವೆಂಕಟೇಶ್ ರವರು ಶ್ರಮಪಟ್ಟು ಕಳೆದುಹೋದ ವಸ್ತುಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಿದರು.

ಸಮಗ್ರ ತನಿಖೆಯಿಂದ ಕೇವಲ ಎರಡು ದಿನಗಳಲ್ಲಿ ಬಂಗಾರ ಮತ್ತು ಪರ್ಸ್ ಪತ್ತೆ ಹಚ್ಚಿದ ಮೂಡಬಿದ್ರೆ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆಯ ವ್ಯಕ್ತವಾಯಿತು.

Leave a Reply

Your email address will not be published. Required fields are marked *

Join WhatsApp Group
error: Content is protected !!