ಪುತ್ತೂರು: ಮೆಸ್ಕಾಂ ಕಾರ್ಯ ಮತ್ತು ಪಾಲನಾ ಶಾಖೆ, ಪುತ್ತೂರು ನಗರ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶುಕ್ರವಾರ ಹರ್ಷೋದ್ಗಾರದಿಂದ ಆಚರಿಸಲಾಯಿತು.

ಶಾಖೆಯ ಸಹಾಯಕ ಇಂಜಿನಿಯರ್ ಶ್ರೀ ರಾಜೇಶ್ ಅವರು ಧ್ವಜಾರೋಹಣ ನೆರವೇರಿಸಿ, ದೇಶಪ್ರೇಮ ಮತ್ತು ಏಕತೆಯ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಶಾಖೆಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು. ಅತಿಥಿಗಳಾಗಿ ಪುತ್ತೂರು ಸೆಂಟರಿಯ ಶ್ರೀ ಸಂಕಪ್ಪ ಗೌಡ, ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ (ಮೆಸ್ಕಾಂ, ಪುತ್ತೂರು) ಶಿವಾನಂದ ಶೇಟ್, ಜಯಂತ್ ಬಾಯಾರು, ಕೃಷ್ಣ ಗೌಡ ಹಾಗೂ ರಾಧಿಕಾ ಎಲೆಕ್ಟ್ರಿಕಲ್ಸ್‌ನ ಪ್ರತಿನಿಧಿಗಳು ಭಾಗವಹಿಸಿದರು.

ಕಾರ್ಯಕ್ರಮವನ್ನು ಸಂತೋಷ ಜಾಧವ ನಿರೂಪಿಸಿದ್ದು, ನಬಿಸಾಬ್ ನದಾಫ್ ವಂದನಾರ್ಪಣೆ ಸಲ್ಲಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!