ಸುಳ್ಯ: ಮಡಿಕೇರಿ ಕಡೆಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಕೆಂಪುಕಲ್ಲುಗಳ ಅಟ್ಟಹಾಸವನ್ನು ಸುಳ್ಯ ಪೊಲೀಸರು ಭೇದಿಸಿದ್ದಾರೆ.

ಆಗಸ್ಟ್‌ 24ರಂದು ಬೆಳಿಗ್ಗೆ, ಮುರೂರು ಕಡೆಯಿಂದ ಸುಳ್ಯ ಮಾರ್ಗವಾಗಿ ಮಡಿಕೇರಿ ಕಡೆಗೆ ಸಾಗಿಸುತ್ತಿದ್ದ 4 ಲಾರಿಗಳನ್ನು ಜಾಲ್ಸೂರು ಗ್ರಾಮದ ಅಡ್ಕಾರು ಬಳಿ ತಡೆದು ಪರಿಶೀಲಿಸಿದಾಗ, ಯಾವುದೇ ಅನುಮತಿಯಿಲ್ಲದೆ ಕೆಂಪುಕಲ್ಲು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

👉 ವಶಪಡಿಸಿದ 4 ಲಾರಿಗಳ ಮೌಲ್ಯ ₹45 ಲಕ್ಷ ಆಗಿದ್ದು, ಒಟ್ಟು 1750 ಕೆಂಪುಕಲ್ಲುಗಳ ಮೌಲ್ಯ ₹43,750 ಎಂದು ಅಂದಾಜಿಸಲಾಗಿದೆ.
👉 ವಾಹನಗಳ ಚಾಲಕರು ಹಾಗೂ ಮಾಲಕರ ವಿರುದ್ಧ ಅ.ಕ್ರ. 91/2025 ಅಡಿಯಲ್ಲಿ BNS 303(2), MMRD ನಿಯಮ 4(1), KMCR 3.44 & 66(1) ಹಾಗೂ IMV Act 192(a) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!