
ಮಂಗಳೂರು: ಧರ್ಮಸ್ಥಳ ಬೆಳವಣಿಗೆ ಕುರಿತು ಕೃತಕ ಬುದ್ಧಿಮತ್ತೆ ನೆರವಿನಿಂದ ತಯಾರಿಸಿದ ವಿಡಿಯೊವನ್ನು ಪ್ರಸಾರ ಮಾಡಿದ್ದಕ್ಕಾಗಿ ದಾಖಲಾಗಿದ್ದ ಪ್ರಕರಣ ಸಂಬಂಧ ಯೂಟ್ಯೂಬರ್ ಸಮೀರ್ ಮತ್ತೆ ಎರಡನೇ ದಿನದ ವಿಚಾರಣೆಗೆ ಆಗಮಿಸಿದ್ದಾರೆ.
ಧರ್ಮಸ್ಥಳ ಪ್ರಕರಣ ಸಂಬಂಧ ತನ್ನ ವಿರುದ್ಧ ದಾಖಲಾದ ಪ್ರಕರಣದ ವಿಚಾರಣೆಗಾಗಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಗೆ ವಕೀಲರ ಜೊತೆ ಕಾರಿನಲ್ಲಿ ಬಂದಿದ್ದಾರೆ.
ನಾಲ್ವರು ವಕೀಲರ ಜೊತೆಗೆ ಮೊದಲ ದಿನದ ವಿಚಾರಣೆಗೆ ಹಾಜರಾದ ಸಮೀರ್, 5 ಗಂಟೆ ಬೆಳ್ತಂಗಡಿ ಠಾಣೆಯಲ್ಲೇ ಇದ್ದರು.






