ಚಿತ್ರದುರ್ಗ ಮೂಲದ ಡ್ಯಾನ್ಸ್ ಮಾಸ್ಟರ್ ಒಬ್ಬರ ಕತ್ತು ಸೀಳಿ ಕೊ*ಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಮೊಟೆಬೆನ್ನೂರು ಎಂಬಲ್ಲಿ ನಡೆದಿದೆ. ಲಿಂಗೇಶ್ ಕೊ*ಲೆಯಾದ ಡ್ಯಾನ್ಸ್ ಮಾಸ್ಟರ್. ಲಿಂಗೇಶ್ ಮೃತದೇಹ ಹಾವೇರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 48ರ ಫ್ಲೈಓವರ್ ಮೇಲೆ ಪತ್ತೆಯಾಗಿದೆ.

ಮೃತ ಲಿಂಗೇಶ್ ಚಿತ್ರದುರ್ಗದಲ್ಲಿ ಡ್ಯಾನ್ಸ್ ಸ್ಕೂಲ್ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಭಾನುವಾರ ರಾತ್ರಿ ಮನೆಯಿಂದ ಹೊರ ಹೋಗಿದ್ದ ಲಿಂಗೇಶ್ ಮನೆಗೆ ಶವವಾಗಗಿ ಬಂದಿದ್ದಾರೆ.

ಭಾನುವಾರ ರಾತ್ರಿ ಲಾಂಗ್ ರೈಡ್ ಹೋಗುತ್ತಿರೋದಾಗಿ ಲಿಂಗೇಶ್ ಮನೆಯಿಂದ ಹೊರ ಹೋಗಿದ್ದರು. ತಾಯಿ ರಾತ್ರಿ ಊಟಕ್ಕೆ ಕರೆಯಲು ಫೋನ್ ಮಾಡಿದ್ದಾಗ ಲಿಂಗೇಶ್, ಬರ್ತಿನಮ್ಮ ಎಂದು ಸಹ ಹೇಳಿದ್ದರು. ಆದರೆ ಈ ವೇಳೆಗಾಗಲೇ ಲಿಂಗೇಶ್ ಹುಬ್ಬಳ್ಳಿ ತಲುಪಿದ್ದರು ಎನ್ನಲಾಗಿದೆ. ಇದೀಗ ಬೆಳಗ್ಗೆ ಲಿಂಗೇಶ್ ಮೃತದೇಹ ಪತ್ತೆಯಾಗಿದೆ. ಲಿಂಗೇಶ್ ಹುಬ್ಬಳ್ಳಿಗೆ ಬಂದ ಮೇಲೆ ಏನಾಯ್ತು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಮತ್ತೊಂದೆಡೆ ಲಿಂಗೇಶ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಶವ ಪತ್ತೆಯಾದ ಸ್ಥಳದಲ್ಲಿ ಚಾಕು ಪತ್ತೆ

ಕತ್ತು ಸೀಳಿ ಕೊ*ಲೆ ಮಾಡಿರುವ ಹಂತಕರು ಶವವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಬಿಟ್ಟು ಹೋಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಲಿಂಗೇಶ್ ಬಳಸುತ್ತಿದ್ದ ಡ್ಯೂಕ್ ಬೈಕ್, ಒಂದು ನೀರಿನ ಬಾಟೆಲ್, ಸಿಗರೇಟ್ ಪ್ಯಾಕ್ ಮತ್ತು ಸಣ್ಣದಾದ ಚಾಕು ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹಾವೇರಿ ಎಸ್‌ಪಿ ಯಶೋಧಾ ವಂಟಗೋಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಿಂಗೇಶ್ ಶವ ಪತ್ತೆಯಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಭಯ ಆಗ್ತಿದೆ ಅಂತ ಹೇಳ್ತಿದ್ದ ಎಂದ ಸ್ನೇಹಿತ

ಕಳೆದ ಕೆಲವು ದಿನಗಳಿಂದ ಲಿಂಗೇಶ್ ಒತ್ತಡದಲ್ಲಿರೋದು ನನ್ನ ಗಮನಕ್ಕೂ ಬಂದಿತ್ತು. ನನ್ನ ಮಕ್ಕಳು ಬೆಂಗಳೂರಿನಲ್ಲಿ ಓದುತ್ತಿದ್ದು, ಅವರನ್ನು ಭೇಟಿಯಾಗಲು ಹೋಗಿದ್ದಾಗಲೂ ನನಗೆ ಕಾಲ್ ಮಾಡಿದ್ದ. ಏನೋ ಒಂದು ರೀತಿಯಲ್ಲಿ ಭಯ ಆಗ್ತಿದೆ ಅಂತ ಸಹ ಹೇಳಿಕೊಂಡಿದ್ದನು. ನಾನು ಅವನೊಂದಿಗೆ ಸೇರಿಕೊಂಡು ಕೆಫೆ ಆರಂಭಿಸಿದ್ದೇವು. ಕೆಫೆಯಲ್ಲಿ ಕುಳಿತುಕೊ ಎಂದು ಹೇಳಿದ್ದೆ. ಬೆಂಗಳೂರಿನಿಂದ ಬಂದ್ಮೇಲೆ ಆತನನ್ನು ಕರೆಸಿಕೊಂಡು ಮಾತನಾಡಿದ್ದೆ. ಆದ್ರೆ ಅವನು ಎಲ್ಲಾ ವಿಷಯಗಳನ್ನು ಹೇಳಿಕೊಳ್ಳುತ್ತಿರಲಿಲ್ಲ. ಇದೀಗ ಅವನ ಕೊ*ಲೆಯಾಗಿರೋ ವಿಷಯ ಕೇಳಿ ಶಾಕ್ ಆಗಿದೆ ಎಂದು ಲಿಂಗೇಶ್ ಸ್ನೇಹಿತ ಹೇಳಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!