ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ದೂರುದಾರನಾಗಿ ಬಂದ ಮಾಸ್ಕ್ ಮ್ಯಾನ್ ಅಲಿಯಾಸ್ ಚಿನ್ನಯ್ಯನ ಅರೆಸ್ಟ್ ಮಾಡಿರುವ ಎಸ್‌ಐಟಿ ತನಿಖೆ ತೀವ್ರಗೊಳಿಸಿದೆ. ವಿಚಾರಣೆ ಜೊತೆಗೆ ಚಿನ್ನಯ್ಯನ ಕರೆದುಕೊಂಡು ಸ್ಥಳ ಮಹಜರು ನಡೆಸಲಾಗುತ್ತಿದೆ. ಬೆಂಗಳೂರು, ಮಹೇಶ್ ಶೆಟ್ಟಿ ತಿಮರೋಡಿ ಮನೆ, ಜಯಂತ್ ಟಿ ಮನೆಯಲ್ಲೂ ಸ್ಥಳ ಮಹಜರು ನಡೆಸಲಾಗಿತ್ತು.

ಇದೀಗ ಉಜಿರೆಯ ಹಳ್ಳಿ ಮನೆ ಹೊಟೆಲ್‌ನಲ್ಲಿ ಚಿನ್ನಯ್ಯನ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಲಾಗಿದೆ. ಬೆಳ್ತಂಗಡಿ ಎಸ್‌ಐಟಿ ಕಚೇರಿಯಿಂದ ಚಿನ್ನಯ್ಯನ ಕರೆದುಕೊಂಡು ಉಜಿರೆಯಲ್ಲಿರುವ ಹಳ್ಳಿ ಮನೆ ಹೊಟೆಲ್‌ನಲ್ಲಿ ಸ್ಥಳ ಮಹಜರು ನಡೆಸಲಾಗಿದೆ.

ಪೊಲೀಸ್ ಬಿಗಿ ಭದ್ರತೆಯಲ್ಲಿ ಸ್ಥಳ ಮಹಜರು

ಬಿಗಿ ಪೊಲೀಸ್ ಭದ್ರತೆಯಲ್ಲಿ ಚಿನ್ನಯ್ಯನ ಕರೆತಂದ ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ. ವಿಚಾರಣೆ ವೇಳೆ ಚಿನ್ನಯ್ಯ 6 ತಿಂಗಳ ಹಿಂದೆ ಹಳ್ಳಿ ಮನೆ ಹೊಟೆಲ್‌ನಲ್ಲಿ ಉಳಿದುಕೊಂಡಿದ್ದಾಗಿ ಹೇಳಿದ್ದ. ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಹಳ್ಳಿ ಮನೆ ಹೊಟೆಲ್‌ನಲ್ಲಿ ಚಿನ್ನಯ್ಯನಿಗೆ ವಾಸ್ತವ್ಯ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಹಳ್ಳಿ ಮನೆ ಹೊಟೆಲ್‌ನಲ್ಲಿ ಸ್ಥಳ ಮಹಜರು ಮಾಡಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!