
ಪುತ್ತೂರು: ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥೆಯ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಪುತ್ತೂರಿನ ಕಮ್ಯೂನಿಟಿ ಸೆಂಟರ್‌ನಲ್ಲಿ ನೆರವೇರಿತು. ಸಭೆಗೆ ಅಧ್ಯಕ್ಷತೆ ಸಂಸ್ಥೆಯ ಅಧ್ಯಕ್ಷ ಆಸೀಫ್ ಪಾಪೆತಡ್ಕ ವಹಿಸಿದ್ದರು. ಅಬ್ದುಲ್ ರಝಾಕ್ ಸಾಲ್ಮರ ಅವರ ಕಿರಾಹತ್ ಮೂಲಕ ಮಹಾಸಭೆಗೆ ಚಾಲನೆ ದೊರೆಯಿತು. ಪ್ರಧಾನ ಕಾರ್ಯದರ್ಶಿ ರಿಯಾಝ್ ಶಾಂತಿಗೋಡು ಸ್ವಾಗತಿಸಿ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿದರು.
2025-26 ನೇ ಸಾಲಿನ ನೂತನ ಸಮಿತಿಯ ರಚನೆ ನಡೆಯಿತು. ಅಧ್ಯಕ್ಷರಾಗಿ ಸಿದ್ದೀಕ್ ಗಡಿಪ್ಪಿಲ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಸಾಲ್ಮರ, ಉಪಾಧ್ಯಕ್ಷರಾಗಿ ನಾಸಿರ್ ಪರ್ಪುಂಜ ಹಾಗೂ ಕೋಶಾಧಿಕಾರಿಯಾಗಿ ರಿಯಾಝ್ ಶಾಂತಿಗೋಡು ಆಯ್ಕೆಗೊಂಡರು.
ಕಾರ್ಯಕಾರಿಣಿ ಸದಸ್ಯರಾಗಿ ಅಜೀರ್ ಕಲ್ಲಡ್ಕ, ಆಸೀಫ್ ಪಾಪೆತಡ್ಕ, ಆರಿಸ್ ಸವನೂರು, ನೌಶಾದ್ ಕಟ್ಟತ್ತಾರ್, ಉಸ್ಮಾನ್ ಎ ಕೆ, ಸಮದ್ ಮಾಂತೂರು, ಸಾದಿಕ್ ಅರಿಯಡ್ಕ, ಇರ್ಷಾದ್ ಕಾವು ಹಾಗೂ ಫಿರೋಝ್ ಪಾಲ್ತಾಡ್ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಸಮದ್ ಮಾಂತೂರು ಸ್ವಾಗತಿಸಿ, ನಾಸಿರ್ ಪರ್ಪುಂಜ ವಂದಿಸಿದರು.






