
ಕರ್ನಾಟಕ ಇಸ್ಲಾಮಿಕ್ ಸೆಂಟರ್ (KIC) ಒಮಾನ್ ರಾಷ್ಟ್ರೀಯ ಸಮಿತಿಯು ಸಬ್ಲತ್ ಮತ್ರ ಸಭಾಂಗಣದಲ್ಲಿ ವಿಜೃಂಭಣೆಯೊಂದಿಗೆ ಇಶ್ಕೆ ರಸೂಲ್ 2025 ಮಿಲಾದ್ ಕಾರ್ಯಕ್ರಮವನ್ನು ಆಯೋಜಿಸಿತು.
ಕಾರ್ಯಕ್ರಮದ ಅಂಗವಾಗಿ ಮೌಲಿದ್ ಪಾರಾಯಣ, ಬುರ್ದಾ ಮಜ್ಲಿಸ್, ವಿದ್ಯಾರ್ಥಿಗಳಿಂದ ಕಲಾ ಸ್ಪರ್ಧೆಗಳು, ವಯಸ್ಕರಿಗೆ ರಸಪ್ರಶ್ನೆ ಸ್ಪರ್ಧೆಗಳು, ಮಹಿಳೆಯರಿಗೆ ಅಡುಗೆ ಸ್ಪರ್ಧೆಗಳು, ಜೊತೆಗೆ ಯಾಸಿರ್ ಹಾಜಿ ಕಲ್ಲಡ್ಕ ಅವರಿಂದ ಜಿಸಿಸಿ ಕರೆನ್ಸಿಗಳ ವಿಶೇಷ ಪ್ರದರ್ಶನ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಝುಬೈರ್ ಹಾಜಿ ನಂಜೆ ತಿಂಗಳಾಡಿ ಅಧ್ಯಕ್ಷತೆ ವಹಿಸಿದರು. ಶುಕೂರ್ ಹಾಜಿ ಉದ್ಘಾಟನೆ ನೆರವೇರಿಸಿದರು. ಬಹುಮಾನ್ಯ ಮುಹಮ್ಮದ್ ಹನೀಫ್ ನಿಝಾಮಿ ಮುಖ್ಯ ಪ್ರಭಾಷಣ ಮಾಡಿದರು. ಶೇಖ್ ಅಬ್ದುಲ್ ರಹಮಾನ್ ಮುಸ್ಲಿಯಾರ್ ಪ್ರಾರ್ಥನೆಗೆ ನೇತೃತ್ವ ವಹಿಸಿದರು. ಉಸ್ತಾದ್ ಮುಹಮ್ಮದ್ ಬಯಾನಿ ಮೌಲಿದ್ ಪಾರಾಯಣಕ್ಕೆ ನೇತೃತ್ವ ನೀಡಿದರು, ಉಸ್ತಾದ್ ಮೊಯಿನ್ ಫೈಝಿ ಉಸ್ತಾದರ ಬುರ್ದಾ ಆಲಾಪನೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಕಾರ್ಯಕ್ರಮದಲ್ಲಿ ಅಶ್ರಫ್ ಷಾ ಮಾಂತೂರ್ (ಯುಎಇ), ಲತೀಫ್ ಮರಕ್ಕನಿ (ಸೌದಿ), ನಿಝಾಮ್ ಬೆಳ್ಳಾರೆ (ಸೌದಿ), ಅಬ್ದುರ್ರಹ್ಮಾನ್ ಮೊನಬ್ಬ (DKSC ಮಸ್ಕತ್), ಅಲ್ತಾಫ್ (DKSC ಮಸ್ಕತ್), ಫರಿಯಾಝ್ (ಸೂರ್ ಬಹಲಾ) ಮತ್ತು ಇತರ ಅತಿಥಿಗಳು ಭಾಗವಹಿಸಿ ಶುಭ ಹಾರೈಸಿದರು.
ಕೆಐಸಿ ಒಮಾನ್ ಸಮಿತಿಯ ಅಧ್ಯಕ್ಷ ಹನೀಫ್ ಕಲ್ಲಡ್ಕ, ಕಾರ್ಯದರ್ಶಿಗಳು ಝಕರಿಯ್ಯಾ ಬಪ್ಪಳಿಗೆ, ಇಮ್ತಿಯಾಝ್ ಹಾಜಿ ಬಪ್ಪಳಿಗೆ, ಅಬ್ಬಾಸ್ ನುಜೂಮ್, ಮುಹಮ್ಮದ್ ಬಶೀರ್ ನಂಜೆ, ಹಾಶಿರ್ ಹಾಜಿ ನಂಜೆ, ಕಲಂದರ್ ನವಾಝ್, ತಮೀಮ್ ನೀರ್ಕಜೆ, ಫಯಾಸ್ ಬೈತಡ್ಕ, ಇರ್ಷಾದ್ ಕೂರ್ನಡ್ಕ, ಹಾರಿಸ್ ಪುಣಚ ಹಾಗೂ ಅನೇಕರು ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಸುಮಾರು 500 ಕ್ಕೂ ಹೆಚ್ಚು ಅನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸ್ಪರ್ಧಾ ವಿಜೇತರು ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಬಹುಮಾನ ನೀಡಲಾಯಿತು. ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕೊನೆಯಲ್ಲಿ ತಬರ್ರುಕ್ ವಿತರಣೆ ನಡೆಯಿತು.






