
ಕೆಮ್ಮಾಯಿ: ಬದ್ರಿಯಾ ಜುಮಾ ಮಸೀದಿ ಜಮಾಅತ್ ವ್ಯಾಪ್ತಿಯ ದಾರಂದಕುಕ್ಕು ಮೂಲದ ಡಾ. ನದೀಮ್ ಡಿಕೆ ಅವರಿಗೆ ಜುಮಾ ನಮಾಝಿನ ಬಳಿಕ ಜಮಾಅತ್ ಕಮಿಟಿ ಹಾಗೂ ಈದ್ ಮಿಲಾದ್ ಸಮಿತಿ ವತಿಯಿಂದ ಭಾನುವಾರ ಸನ್ಮಾನ ನಡೆಯಿತು.
ಸಣ್ಣ ವಯಸ್ಸಿನಿಂದಲೇ ಕಲಿಕೆಯಲ್ಲಿ ಮುಂಚೂಣಿಯಲ್ಲಿದ್ದ ನದೀಮ್ ಅವರು ಮಡಿಕೇರಿಯ ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ MBBS ಪದವಿ ಪೂರೈಸಿ ಪ್ರಸ್ತುತ ಇಂಟರ್ನ್‌ಶಿಪ್ ಮಾಡುತ್ತಿದ್ದಾರೆ.
ಇವರು ದಾರಂದಕುಕ್ಕಿನ ಉದ್ಯಮಿ ಹಂಝ ಹಾಜಿ ಡಿಕೆ ಮತ್ತು ನಸೀಮಾ ಡಿಕೆ ಅವರ ಸುಪುತ್ರರಾಗಿದ್ದಾರೆ.






