ಪುತ್ತೂರು: ಮಳೆಗಾಲ ಆರಂಭ ಹಾಗೂ ಕೊನೆಯ ದಿನಗಳಲ್ಲಿ ಹೆಚ್ಚಾಗಿ ಸಿಡಿಲಿನ ಅಬ್ಬರಕ್ಕೆ ತತ್ತರಿಸುತ್ತಿದ್ದ ಪುತ್ತೂರಿನ ಜನತೆಗೆ ಈಗ ಭಯಪಡುವ ಅಗತ್ಯವಿಲ್ಲ. ಬಿರುಮಲೆ ಬೆಟ್ಟದಲ್ಲಿ ಆಧುನಿಕ ತಂತ್ರಜ್ಞಾನದ ಮಿಂಚು ಬಂಧಕವನ್ನು ಅಳವಡಿಸಲಾಗಿದ್ದು, ಇದರ ಲೋಕಾರ್ಪಣೆ ಸೆಪ್ಟೆಂಬರ್ 27ರಂದು ನಡೆಯಲಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದ ಜನತೆಯ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿದ ಶಾಸಕ ಅಶೋಕ್ ರೈ, ಪ್ರಾರಂಭಿಕ ಹಂತದಲ್ಲಿ ಈ ಮಿಂಚು ಬಂಧಕವನ್ನು ಅಳವಡಿಸಿದ್ದಾರೆ. ಬಿರುಮಲೆ ಬೆಟ್ಟ ಸೇರಿದಂತೆ ಕ್ಷೇತ್ರದ ನಾಲ್ಕು ಕಡೆಗಳಲ್ಲಿ ಪ್ರಾಯೋಗಿಕವಾಗಿ ಮಿಂಚು ಬಂಧಕ ಅಳವಡಿಸುವ ಕಾರ್ಯ ನಡೆಯುತ್ತಿದೆ.

ಸಿಡಿಲು ಅಬ್ಬರದಿಂದ ರಕ್ಷಣೆ
ಕರಾವಳಿ ಭಾಗದಲ್ಲಿ ಪ್ರತೀ ಮಳೆಗಾಲದ ಆರಂಭ ಹಾಗೂ ಅಂತ್ಯದಲ್ಲಿ ಸಿಡಿಲುಮಿಂಚಿನ ತೀವ್ರತೆ ಹೆಚ್ಚಿರುತ್ತದೆ. ಇದರಿಂದಾಗಿ ಹಲವಾರು ಮಂದಿ ಪ್ರಾಣ ಕಳೆದುಕೊಂಡ ಘಟನೆಗಳು ಸಂಭವಿಸಿವೆ. ಕೃಷಿ ಪಂಪ್ ಶೆಡ್‌ಗಳಲ್ಲಿ, ಹೊಲಗಳಲ್ಲಿ ಕೆಲಸ ಮಾಡುವಾಗ, ಮನೆಗಳಿಗೆ ಸಿಡಿಲು ಬಡಿದಾಗ ಮಾತ್ರವಲ್ಲದೆ ಅನೇಕ ಮೂಕಪ್ರಾಣಿಗಳು ಸಹ ಸಿಡಿಲಿಗೆ ಬಲಿಯಾಗಿವೆ. ಕಳೆದ ಮಳೆಗಾಲದಲ್ಲಿ ಐದಾರು ಮಂದಿ ಸಿಡಿಲಿನ ಆಘಾತಕ್ಕೆ ಬಲಿಯಾದ ಹಿನ್ನೆಲೆಯಲ್ಲಿ ಜನರ ಜೀವ ರಕ್ಷಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಎರಡು ಕಿ.ಮೀ ವ್ಯಾಪ್ತಿ ರಕ್ಷಣೆ
ಬಿರುಮಲೆ ಬೆಟ್ಟವನ್ನು ಕೇಂದ್ರೀಕರಿಸಿ ಎರಡು ಕಿ.ಮೀ ವ್ಯಾಪ್ತಿಯೊಳಗೆ ಬರುವ ಎಲ್ಲಾ ಪ್ರದೇಶಗಳನ್ನು ಈ ಮಿಂಚು ಬಂಧಕ ರಕ್ಷಿಸುತ್ತದೆ. ಸಿಡಿಲು ಎಲ್ಲೇ ಹೊಡೆದರೂ ಅದನ್ನು ಸ್ವೀಕರಿಸಿ, ಶಕ್ತಿಯನ್ನು ಕಡಿಮೆ ಮಾಡಿ ಭೂಮಿಯೊಳಗೆ ಸೇರಿಸಿಕೊಳ್ಳುತ್ತದೆ. ಇದರ ಪರಿಣಾಮವಾಗಿ ಆ ವ್ಯಾಪ್ತಿಯಲ್ಲಿರುವ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ವಿದ್ಯುತ್ ಉಪಕರಣಗಳಿಗೆ ಹಾನಿ ಆಗುವುದಿಲ್ಲ.

ಪ್ರಯೋಗ ಯಶಸ್ವಿಯಾದರೆ ಪ್ರತೀ ಗ್ರಾಮಕ್ಕೂ
ನಾಲ್ಕು ಕಡೆಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾದ ಮಿಂಚು ಬಂಧಕ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮ ಮಟ್ಟದಲ್ಲೂ ಅವಶ್ಯಕತೆಯ ಪ್ರಕಾರ ಮಿಂಚು

Leave a Reply

Your email address will not be published. Required fields are marked *

Join WhatsApp Group
error: Content is protected !!