
ರಾಜ್ಯ ಪ್ರವಾಸ ಕೈಗೊಂಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್(Nirmala Sitharaman) ದೀಪಾವಳಿಗೂ(deepavali) ಮುನ್ನ ಜಿಎಸ್ಟಿ(gst) ಪ್ರಮಾಣ ಇಳಿಕೆ ಮಾಡಲಾಗುವುದು ಎಂದು ಕೊಪ್ಪಳದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಕನ್ನಡದಲ್ಲಿಯೇ ಮಾತು ಶುರು ಮಾಡಿ, ನಾನು ಕರ್ನಾಟಕದಿಂದ ಆಯ್ಕೆಯಾಗಿದ್ದೇನೆ, ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಒಂದೊಂದು ರೈತರಿಗೆ ಉಪಯೋಗವಾಗುವ ಯೋಜನೆ ಆರಂಭಿಸಲಾಗಿದೆ. ರೈತರಿಗೆ ಉತ್ಪಾದನೆಯ ಮೌಲ್ಯವರ್ಧಿತರ ತರಬೇತಿ ನೀಡಲಾಗುವುದು.
ಕೊಪ್ಪಳವು ಇಡೀ ರಾಜ್ಯಕ್ಕೆ ಅನ್ನ ನೀಡುವ ಸ್ಥಳ. ಇಲ್ಲಿ ಹಣ್ಣು ಹಾಗು ತರಕಾರಿಗೆ ಮೌಲ್ಯವರ್ಧನೆ ಮಾಡಲಾಗುವುದು. ಇನ್ನು ತುಂಗಭದ್ರಾ ನೀರಾವರಿ ಪ್ರದೇಶವಾಗಿದೆ. ಕಡಿಮೆ ನೀರು ಬಳಸಿ ಹಣ್ಣು, ತರಕಾರಿ ಬೆಳೆಯಲಾಗುವುದು. ಮಳೆ ಹಾನಿಯಾಗದಂತೆ ಸಂಗ್ರಹಣೆ ಕ್ರಮ ವಹಿಸಲಾಗುವುದು ಎಂದರು.
ಕೊಪ್ಪಳದಲ್ಲಿ ಕೃಷಿ ಸಂಸ್ಕರಣಾ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ ಉದ್ಘಾಟನೆ!
ಕೃಷಿ ಸಂಸ್ಕರಣಾ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ ಉದ್ಘಾಟಿಸಿ ಬಳಿಕ ಮಾತನಾಡಿ,ಇಲ್ಲಿಯ ಮಾವು., ಪೇರಲ, ಅಂಜೂರ ಸೇರಿ ವಿವಿಧ ಹಣ್ಣು ಸಂಸ್ಕರಣೆ, ರೈತ ಕಂಪನಿಗಳಿಂದ ತಯಾರಿಸಿದ ವಸ್ತುಗಳ ವೀಕ್ಷಣೆ, ರೈತರು ಉತ್ಪಾದಿಸುವ ವಸ್ತುಗಳ ಮೌಲ್ಯವರ್ಧನೆಯ ಬಗ್ಗೆ ಸಲಹೆ ನೀಡಿದರು. ಇನ್ನು ದೀಪಾವಳಿಯ ಮುನ್ನ ಜಿಎಸ್ಟಿ ಪ್ರಮಾಣ ಇಳಿಕೆ ಮಾಡಲಾಗುವುದು, ಈ ಹಿಂದೆ ಇದ್ದ 12 ರಷ್ಟನ್ನು ಈಗ 5 ರಷ್ಟು ಇಳಿಕೆ ಮಾಡಲಾಗುವುದು, ಬಯೋ ಪ್ರಾಡಕ್ಟ್ ಗಳಿಗೆ ಜಿಎಸ್ಟಿ ಕಡಿಮೆ ಮಾಡಲಾಗುವುದು, ಪಿಎಂಎಫ್‌ಎಂಇ 2020 ರಲ್ಲಿ ಆರಂಭವಾಗಿದೆ. ಮೌಲ್ಯವರ್ಧನೆ ವಸ್ತುಗಳಿಗೆ ಕೇಂದ್ರ ಸರಕಾರ ಹಣಕಾಸು ಹಾಗು ತರಬೇತಿ ನೀಡಲಾಗುವುದು ಎಂದರು.
ಕೇಂದ್ರ ಸರಕಾರ ಪ್ರಧಾನ ಮಂತ್ರಿಗಳು ದೇಶದ 100 ಜಿಲ್ಲೆಯಲ್ಲಿ ಧನ್ ಧಾನ್ಯ ಯೋಜನೆ ಜಾರಿ ಮಾಡಿದ್ದಾರೆ ಅದರಲ್ಲಿ ಕೊಪ್ಪಳ ಜಿಲ್ಲೆಯೂ ಸೇರಿದೆ. ಈ ಯೋಜನೆಯಿಂದ ಗುಣಮಟ್ಟದ ಬೀಜ, ತಾಂತ್ರಿಕ ಹಾಗು ಸಹಜ ಕೃಷಿಗೆ ಮಾಹಿತಿ ನೀಡಲಾಗುವುದು, ನೀರಾವರಿ ಸೌಲಭ್ಯ, ಸುಧಾರಣೆಯಾಗಲಿದೆ ಮಾರುಕಟ್ಟೆ ಸಂಪರ್ಕ ಇನ್ನೂ ಸುಲಭವಾಗುತ್ತದೆ.
ನನಗೆ ಕೊಪ್ಪಳದಲ್ಲಿ ಒಂದು ಸುವರ್ಣ ಅವಕಾಶ ಸಿಕ್ಕಿದೆ. ಕಲ್ಯಾಣ ಕರ್ನಾಟಕದ ೭ ಜಿಲ್ಲೆಗಳಿಗೆ ರೈತರ ತರಬೇತಿ ಕೇಂದ್ರಗಳ ಮಾಡಲು ಹಣ ನೀಡುರುವೆ. ಉತ್ತಮ ಬೆಳೆ, ಬೆಳೆಯನ್ನು ಪ್ಯಾಕೇಜ್ ಮಾಡುವುದು, ಅದಕ್ಕೆ ಉತ್ತಮ ಮಾರುಕಟ್ಟೆ ಒದಗಿಸುವುದು, ಇದಕ್ಕೆ ನಬಾರ್ಡ್ ಸಂಸ್ಥೆ ನಮಗೆ ಕೈಜೋಡಿಸಿದೆ.
ನಮ್ಮ ಸರ್ಕಾರದಿಂದ ನಾವು ಹಣ ಕೊಡುತ್ತೇವೆ, ಆದರೆ ನಬಾರ್ಡ್ ಸಹ ನಮ್ಮೊಂದಿಗೆ ಕೈಜೋಡಿಸಿದೆ. ರೈತರಿಗೆ ತರಬೇತಿ ನೀಡಲು ಮುಂದಾಗಿದೆ. ಹೀಗಾಗಿ ಕೊಪ್ಪಳ ಅಕ್ಷಯಪಾತ್ರೆ ಎಂದು ಕರೆಸಿಕೊಳ್ಳುತ್ತೆ, ೧೦೦ ಯುನಿಟ್ ನಲ್ಲಿ ೧೦ ಯುನಿಟ್ ಅಕ್ಕಿ ಕೊಪ್ಪಳದಲ್ಲಿ ಉತ್ಪಾದನೆ ಆಗುತ್ತೆ, ವಿವಿಧ ಬಗೆಯ ಹಣ್ಣು, ದವಸಧಾನ್ಯಗಳನ್ನು ಇಲ್ಲಿ ಬೆಳೆಯಲಾಗುತ್ತೆ,ಇವುಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗಬೇಕು, ಹಾಗಾಗಿ ಇದನ್ನು ಉತ್ತೇಜನ ಮಾಡಲು ನಮ್ಮ ಸರ್ಕಾರ ಮುಂದಾಗಿದೆ.
ಮಳೆ ಆಗದಿದ್ದರೆ ಇಲ್ಲಿನ ಜನರು ಗುಳೆ ಹೋಗುತ್ತಾರೆ. ಈ ಕಾರಣಕ್ಕೆ ರೈತರು ಗ್ರಾಮಗಳು ತೊರೆಯದಂತೆ, ಈ ವ್ಯಾಲೂ ಎಡಿಷನ್ ಯೋಜನೆಗೆ ಮುಂದಾಗಿದ್ದೇವೆ, ಈ ರೈತರ ತರಬೇತಿ ಕೇಂದ್ರ ಸಾವಿರಾರು ರೈತರಿಗೆ ಅನುಕೂಲ ಆಗುತ್ತದೆ. ಮಾರುಕಟ್ಟೆಯಲ್ಲಿ ಉತ್ತವ ದರ ಸಿಗುತ್ತೆ, ಮೌಲ್ಯ ವರ್ಧನೆಯಿಂದ ಹೆಚ್ಚಿನ ಲಾಭ ಸಿಗುತ್ತೆ, ಹಣ್ಣು, ತರಕಾರಿಗಳಿಂದ ವಿವಿಧ ಉತ್ಪಾದನೆಗಳನ್ನು ಮಾಡಬಹುದು. FSSI ಕೂಡ ಈ ಘಟಕಕ್ಕೆ ಸಿಕ್ಕಿದೆ.ಇದರಿಂದ ಗುಣಮಟ್ಟದ ಉತ್ಪಾದನೆಗಳನ್ನು ಇಲ್ಲಿಂದ ಮಾಡಲಾಗುತ್ತೆ, ಈ ವೇಳೆ ಪ್ರಧಾನಿ ಅವರ ವೋಕಲ್ ಫಾರ್ ಲೋಕಲ್ ಬಗ್ಗೆ ಹೇಳಿ, ಕೊಪ್ಪಳಕ್ಕೆ ಲೋಕಲ್ ಉತ್ಪಾದನೆಗೆ ವೋಕಲ್ ಸಿಗುತ್ತೆ, ಕರ್ನಾಟಕದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಿಂದ 43 ಲಕ್ಷ ರೈತರು ಪಡೆಯುತ್ತಿದ್ದಾರೆ.
ಉತ್ಪಾದನೆಗಳ ಮೇಲೆ ಜಿಎಸ್ ಟಿ ಕಡಿಮೆಯಾಗಿದೆ
ಜಿಎಸ್ ಟಿ ಕೌನ್ಸಿಲ್ ನಿಂದ ಹೊಸ ನೀತಿ ಜಾರಿಯಾಗಿದೆ. ಇದೀಗ ಜಿಎಸ್ ಟಿ ಸುಧಾರಣೆಯಾಗಿದೆ. ಬಹಳಷ್ಟು ಉತ್ಪಾದನೆಗಳ ಮೇಲೆ ಜಿಎಸ್ ಟಿ ಕಡಿಮೆ ಆಗಿದೆ. ರೈತರ ಹಾಗೂ ಕೃಷಿ ಸಲಕರಣೆಗಳ ಮೇಲೆ ಜಿಎಸ್ ಟಿ ದರ ಕಡಿಮೆ ಆಗಿದೆ. ಬಯೋ ಉತ್ಪಾದನೆಗಳ ಮೇಲೂ ಜಿಎಸ್ ಟಿ ಕಡಿಮೆ ಆಗಿದೆ. ಮೈಕ್ರೋ ಉತ್ಪಾದನಾ ಯುನಿಟ್ ಗಳಿಗೆ ಉತ್ತೇಜನ ನೀಡಲಾಗಿದೆ. ಮೈಕ್ರೋ ಉತ್ಪಾದನಾ ಯುನಿಟ್ ಗಳಿಗೆ ಉತ್ತೇಜನ ನೀಡಲಾಗಿದೆ ಎಂದರ
ಹಣಕಾಸು ಹಾಗೂ ತಂತ್ರಜ್ಞಾನ ಸೌಲಭ್ಯ ಹಾಗೂ ಬ್ರ್ಯಾಂಡ್ ಮಾರುಕಟ್ಟೆಯನ್ನು ರೂಪಿಸಲಾಗಿದೆ. ನೀರಾವರಿ ಸೌಲಭ್ಯ ಸುಧಾರಣೆ ಆಗುತ್ತದೆ. ಇಂತಹ ರೈತ ತರಬೇತಿ ಕೇಂದ್ರದಿಂದ ಸಹಕಾರಿ ಆಗಲಿದೆ. ಇದನ್ನು ತಾವೆಲ್ಲ ಸದುಪಯೋಗ ಪಡೆಯಿರಿ ಎಂದರು. ಕೊಪ್ಪಳ ಉತ್ತಮ ಕೃಷಿ ಹಬ್ ಆಗಲಿದೆ. ನಬಾರ್ಡ್ ಹಾಗೂ ಸರ್ಕಾರ ಇಂತಹ ಯೋಜನೆಗಳಿಗೆ ಸಹಕಾರ ನೀಡಬೇಕು. ಇಂತಹ ಯೋಜನೆಗಳನ್ನು ಜನರಿಗೆ ರೈತರಿಗೆ ತಲುಪಿಸುವ ಕೆಲಸ ಮಾಡಿ. ಇಂತಹವುಗಳನ್ನು ಗುರುತಿಸಿ ಪ್ರಚಾರ ಮಾಡಲು ನಿರ್ಮಲಾ ಸೀತಾರಾಮನ್ ವಿನಂತಿಸಿದರು.






