ಮಾಡನ್ನೂರು: ಸಮಸ್ತ-100 ಪ್ರಚಾರ ಪ್ರಯುಕ್ತ, ಇಂದು (ಅ.19) ಸಂಜೆ 3 ಗಂಟೆಗೆ ಮಾಡನ್ನೂರಿನಲ್ಲಿ ಎಸ್‌ಕೆಎಸ್ಎಸ್ಎಫ್ ಮಾಡನ್ನೂರು ಕ್ಲಸ್ಟರ್ ಸಮಿತಿಯ ನೇತೃತ್ವದಲ್ಲಿ ಭವ್ಯ ಸಮಸ್ತ ಆದರ್ಶ ಮಹಾ ಸಮ್ಮೇಳನ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಪಾಣಕ್ಕಾಡ್ ಸಯ್ಯಿದ್ ಮುಈನಲಿ ಶಿಹಾಬ್ ತಂಙಳ್, ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ (ಪುತ್ತೂರು), ಸಯ್ಯಿದ್ ಜಿಫ್ರಿ ತಂಙಳ್ (ಬೆಳ್ತಂಗಡಿ) ಸೇರಿದಂತೆ ಸಮಸ್ತ ಕೇಂದ್ರ ಮುಶಾವರ ಸದಸ್ಯರು ಅಬ್ದುಲ್ ಸಲಾಂ ಬಾಖವಿ, ಅಬ್ದುಲ್ ಖಾದರ್ ಮುಸ್ಲಿಯಾರ್ ಉಸ್ತಾದ್ (ಬಂಬ್ರಾಣ), ತೋಡಾರ್ ಉಸ್ಮಾನುಲ್ ಫೈಝಿ, ಅಬ್ದುಲ್ ಸಲಾಂ ದಾರಿಮಿ (ಆಲಂಪಾಡಿ) ಮುಂತಾದ ಪ್ರಮುಖ ಉಲಮಾ ಉಮರಾ ಸಾದಾತ್ತುಗಳು ಭಾಗವಹಿಸಲಿದ್ದಾರೆ.

ಖ್ಯಾತ ಭಾಷಣಗಾರರಾದ ಅಬ್ದುಲ್ ಹಮೀದ್ ಫೈಝಿ (ಅಂಬಕಡವು), ಸಲಾಹುದ್ದೀನ್ ಫೈಝಿ (ವಲ್ಲಪುಝ), ಸತ್ತಾರ್ (ಪಂದಲ್ಲೂರ್) ಸೇರಿದಂತೆ ಹಲವಾರು ಪ್ರಮುಖರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಸಂಘಟಕರು ಎಲ್ಲಾ ವ್ಯವಸ್ಥೆಗಳನ್ನು ಸಜ್ಜುಗೊಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!