ಪುತ್ತೂರು: ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ನೇತ್ರಾವತಿ ವಲಯ, ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಅಕ್ಟೋಬರ್ 22 ರಂದು ಹಿಂದಾರು ಭಾಸ್ಕರ್ ಆಚಾರ್ ಅವರ ಸಾಯಿ ಭಗವಾನ್‌ ಗೋಶಾಲೆಯಲ್ಲಿ ಭಕ್ತಿಭಾವದಿಂದ ಕೂಡಿದ ಸಾಮೂಹಿಕ ಗೋಪೂಜಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಬ್ರಾಹ್ಮೀ ಶುಭ ಮುಹೂರ್ತದಲ್ಲಿ ಆರಂಭವಾದ ಈ ಕಾರ್ಯಕ್ರಮದಲ್ಲಿ ಸುಮಾರು 178ಕ್ಕೂ ಹೆಚ್ಚು ಯೋಗಬಂಧುಗಳು ಪಾಲ್ಗೊಂಡು, ಹಿಂದಾರು ಪುಣ್ಯನೆಲದಲ್ಲಿ ಸಾಮೂಹಿಕ ಯೋಗಾಭ್ಯಾಸವನ್ನು ನೆರವೇರಿಸಿದರು. ನಿಶಾಲತಾರವರು ಶಿಕ್ಷಣ ವಿಧಿಯನ್ನು ನಡೆಸಿದರು. ವಿನಯ ಪೈ ಅವರು ಗೋಪೂಜೆ ಹಾಗೂ ಗೋವಿನ ಮಹತ್ವದ ಕುರಿತು ಬೌದ್ಧಿಕ ಉಪನ್ಯಾಸ ನೀಡಿದರು.

ಹಿಂದಾರು ಮನೆಯ ಹಿರಿಯರಾದ ಭಾಸ್ಕರ್ ಆಚಾರ್ ಅವರು ಸಮಿತಿಯ ಚಟುವಟಿಕೆಗಳನ್ನು ಮೆಚ್ಚಿ ಮಾತನಾಡುತ್ತಾ, “ಇಂತಹ ಸಂಸ್ಕಾರಮಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ, ಸಂಘಟನೆ ಇನ್ನಷ್ಟು ಗಟ್ಟಿಯಾಗಲಿ,” ಎಂದು ಹಾರೈಸಿದರು.

ಕಾರ್ಯಕ್ರಮದ ಬಳಿಕ ಯೋಗಬಂಧುಗಳು ಗೋಶಾಲೆ ಹಾಗೂ ಗೋವುಗಳ ಸ್ವಚ್ಛತಾ ಕಾರ್ಯ ನಡೆಸಿ, ಗೋಪೂಜೆ ಮಾಡಿ ಸ್ಥಳದಲ್ಲೇ ಶ್ರೀಕೃಷ್ಣ ವಿಗ್ರಹಕ್ಕೆ ಹಾಲಿನ ಅಭಿಷೇಕ ನೆರವೇರಿಸಿದರು.

ಈ ಕಾರ್ಯಕ್ರಮ ಅಭೂತಪೂರ್ವ, ಅವಿಸ್ಮರಣೀಯ ಹಾಗೂ ಆತ್ಮಸಂತೃಪ್ತಿಕರವಾಗಿ ಯಶಸ್ವಿಯಾಗಿ ಪೂರ್ಣಗೊಂಡಿತು.

Leave a Reply

Your email address will not be published. Required fields are marked *

Join WhatsApp Group
error: Content is protected !!