ಕಡಬ ತಾಲೂಕಿನ ಪಾಲ್ತಾಡು ಗ್ರಾಮದ ಜಗದೀಶ (28) ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರುದಾರರ ಹೇಳಿಕೆಯಂತೆ, ಜ.16ರಂದು ರಾತ್ರಿ ಸುಮಾರು 10ರಿಂದ 10.30ರ ನಡುವೆ ಕಡಬ ಗ್ರಾಮದ ಕಳಾರದಲ್ಲಿರುವ ಸುರಭಿ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ ಕ್ಯಾಶ್ ಕೌಂಟರ್ ಬಳಿ ನಿಂತಿದ್ದಾಗ, ಪರಿಚಯಸ್ಥರಾದ ಅಜಯ್, ಬೇಬಿ ಹಾಗೂ ಅನಿಲ್ ಎಂಬವರು ವಿನಾಕಾರಣ ಜಗಳ ಆರಂಭಿಸಿದ್ದಾರೆ. ಈ ವೇಳೆ ಜಾತಿನಿಂದನೆ ಮಾಡುತ್ತಾ ಕೈಯಿಂದ ಕೆನ್ನೆ, ತಲೆ, ಭುಜ ಹಾಗೂ ಬೆನ್ನಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಸಂಖ್ಯೆ 08/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 115(2), 352, 351(3) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅತ್ಯಾಚಾರ ನಿಷೇಧ) ತಿದ್ದುಪಡಿ ಕಾಯ್ದೆ–2015ರ ಕಲಂ 3(1)(r)(s)ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!