
ಪುತ್ತೂರು, ಜ.27: ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ನಡೆದ 33ನೇ ವರ್ಷದ ಹೊನಲು ಬೆಳಕಿನ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ರವಿವಾರ ತಡರಾತ್ರಿ ಸಮಾಪನಗೊಂಡಿದ್ದು, ಒಟ್ಟು 157 ಜೊತೆ ಕೋಣಗಳು ಭಾಗವಹಿಸಿದ್ದವು.
ವಿಜೇತರ ವಿವರ: ಕನೆಹಲಗೆಯಲ್ಲಿ 9 ಜೊತೆ ಕೋಣಗಳು ಭಾಗವಹಿಸಿದ್ದು,
ಬೈಂದೂರು ಸಸಿಹಿತ್ತು ವೆಂಕಟಪೂಜಾರಿ (ಓಡಿಸಿದವರು ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ) ಹಾಗೂ ಬೋಳೀರ ತ್ರಿಶಾಲ್ ಕೆ.ಪೂಜಾರಿ (ಓಡಿಸಿದವರು ತೆಕ್ಕಟೆ ಸುಧೀರ್ ದೇವಾಡಿಗ) ಅವರ ಕೋಣಗಳು ಆರೂವರೆ ಕೋಲು ನಿಶಾನೆಗೆ ನೀರು ಚಿಮ್ಮಿಸಿವೆ.
ಹಗ್ಗ ಹಿರಿಯ: ಹಗ್ಗ ಹಿರಿಯದಲ್ಲಿ 18 ಜೊತೆ ಕೋಣಗಳು ಭಾಗವಹಿಸಿದ್ದು, ಚೆನ್ನಯ ಕರೆಯಲ್ಲಿ ಅತ್ತೂರು ಮನ್ಮಥ ಜೆ. ಶೆಟ್ಟಿ (ಓಡಿಸಿದವರು ಬಾರಾಡಿ ನತೇಶ್ ಸಪಲಿಗ) ಅವರ ಕೋಣಗಳು (ಪ್ರ.), ಕೋಟಿ ಕರೆಯಲ್ಲಿ ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಅವರ (ಓಡಿಸಿದವರು ಕಕ್ಕೆ ಪದವು ಪೆಂರ್ಗಾಲು ಕೃತಿಕ್ ಗೌಡ) ಕೋಣಗಳು ದ್ವಿತೀಯ ಪ್ರಶಸ್ತಿ ಪಡೆದಿದೆ.
ಹಗ್ಗ ಕಿರಿಯ: ಹಗ್ಗ ಕಿರಿಯ ವಿಭಾಗದಲ್ಲಿ 25 ಜೊತೆ ಕೋಣಗಳು ಭಾಗವಹಿಸಿದ್ದು,
ಅದರಲ್ಲಿ ಕೋಟಿ ಕರೆಯಲ್ಲಿ ಕಡಂದಲೆ ಮೂಡಾಯಿಬೆಟ್ಟು ವಿಶ್ವನಾಥ ನಿವಾಸ ಕಾಳು ಪಾಣಾರ (ಓಡಿಸಿದವರು ಕಡಂದಲೆ ರೋಹಿತ್ ಪಾಣಾರ) ಅವರ ಕೋಣಗಳು (ಪ್ರ.), ಚೆನ್ನಯ ಕರೆಯಲ್ಲಿ ಎಂಬತ್ತು ಬಡಗಬೆಟ್ಟು ಕಲ್ಲಪಾವು ಶ್ರೀಕ ಸಂದೀಪ್ ಶೆಟ್ಟಿ (ಓಡಿಸಿದವರು ಮಂದಾರ್ತಿ ಶೀರೂರು ಮುದ್ದುಮನೆ ಭರತ್ ನಾಯ್ಕ ) ಅವರ ಕೋಣಗಳು ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದೆ.
ಅಡ್ಡಹಲಗೆ: ಅಡ್ಡ ಹಲಗೆಯಲ್ಲಿ 6 ಜೊತೆ ಕೋಣಗಳು ಭಾಗವಹಿಸಿದ್ದು, ಚೆನ್ನಯ ಕರೆಯಲ್ಲಿ ನಾರಾವಿ ರಕ್ಷಿತ್ ಜೈನ್ (ಓಡಿಸಿದವರು ಭಟ್ಕಳ ಹರೀಶ್) ಅವರ ಕೋಣಗಳು (ಪ್ರ.), ಕೋಟಿ ಕರೆಯಲ್ಲಿ ಉಡುಪಿ ಕೊರಂಗ್ರಪ್ಪಾಡಿ ಪಡುಮನೆ ರ್ವೀಕರ್ಣ ಪ್ರಭಾಕರ ಹೆಗ್ಡೆ (ಓಡಿಸಿದವರು ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ) ಅವರ ಕೋಣಗಳು (ದ್ವಿ. ಪ್ರಶಸ್ತಿ ಪಡೆದುಕೊಂಡಿವೆ.
ನೇಗಿಲು ಹಿರಿಯ: ನೇಗಿಲು ಹಿರಿಯದಲ್ಲಿ 24 ಜೊತೆ ಕೋಣಗಳು ಭಾಗವಹಿಸಿದ್ದು,
ಚೆನ್ನಯ ಕರೆಯಲ್ಲಿ ಮಾಣಿ ನಾಗರಾಜ ಶೆಟ್ಟಿ ಬಿ. (ಓಡಿಸಿದವರು ಕುಂದಾಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್) ಅವರ ಕೋಣಗಳು (ಪ್ರ.), ಕೋಟಿ ಕರೆಯಲ್ಲಿ ಮಾಣಿ ನಾಗರಾಜ್ ಶೆಟ್ಟಿ ಎ. (ಓಡಿಸಿದವರು ಸೂರಾಲು ಪ್ರದೀಪ್ ನಾಯ್) ಅವರ ಕೋಣಗಳು (2) ಪ್ರಶಸ್ತಿ ಪಡೆದುಕೊಂಡಿವೆ.
ನೇಗಿಲು ಕಿರಿಯ: ನೇಗಿಲು ಕಿರಿಯದಲ್ಲಿ 75 ಜೊತೆ ಕೋಣಗಳು ಭಾಗವಹಿಸಿದ್ದು,
ಚೆನ್ನಯ ಕರೆಯಲ್ಲಿ ಶ್ರೀ ಪಂಚಲಿಂಗೇಶ್ವರ ಉರುವಾಲು ನಾಕಳೆಗುತ್ತು ಸದಾನಂದ ಗೌಡ (ಓಡಿಸಿದವರು ಪಡು ಸಾಂತೂರು ಪೃಥ್ವಿರಾಜ್ ಪೂಜಾರಿ) ಅವರ ಕೋಣಗಳು (ಪ್ರ.), ಕೋಟಿ ಕರೆಯಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ (ಓಡಿಸಿದವರು ಕುಂದಿ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್) ಅವರ ಕೋಣಗಳು (ದ್ವಿ.) ಪ್ರಶಸ್ತಿ ಪಡೆದುಕೊಂಡಿವೆ






