ಫೆ.16: ಕಾಲೇಜಿನ ಪಕ್ಕದಲ್ಲಿ ನಡೆಯುತ್ತಿರುವ ಆರೋಗ್ಯ ಇಲಾಖೆಯ ಕಟ್ಟಡ ಕಾಮಗಾರಿಯಿಂದ ಉಂಟಾಗಿರುವ ಧೂಳಿನ ಸಮಸ್ಯೆ ವಿರುದ್ಧ ವಿದ್ಯಾರ್ಥಿನಿಯರು ತರಗತಿ ಯಿಂದ ಹೊರಬಂದು ಕಾಲೇಜ್ ಮುಂಭಾಗದ ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದ ಘಟನೆ ಸೋಮವಾರ ಪುತ್ತೂರಿನ ಸರಕಾರಿ ಮಹಿಳಾ ಪದವಿ ಕಾಲೇಜ್ ನಲ್ಲಿ ನಡೆದಿದೆ.

ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈ, ಈ ರೀತಿ ನೀವು ಪ್ರತಿಭಟನೆ ಮಾಡುವುದು ಸರಿ ಅಲ್ಲ ನಿಮಗೆ ಹೊಸ ಕಟ್ಟಡಕ್ಕೆ ಅನುದಾನ ಕೊಡಿಸಿರುವುದು ನಾನೇ ಎಂದರು. ಸಮಸ್ಯೆಯನ್ನು ನನ್ನ ಗಮನಕ್ಕೆ ಏಕೆ ತಂದಿಲ್ಲ ಎಂದು ಪ್ರಾಂಶುಪಾಲರು, ಉಪನ್ಯಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಐವನ್ ಪ್ರಾನ್ಸಿಸ್ ಲೋಬೊ ಪರಿಸ್ಥಿತಿ ಬಗ್ಗೆ ವಿವರಿಸಲು ಮುಂದಾದಾಗ ಶಾಸಕರು ಆಕ್ರೋಶ ವ್ಯಕ್ತಪಡಿಸಿದಲ್ಲದೆ ಅವರ ವಿರುದ್ಧ ಹರಿಹಾಯ್ದ

ವಿದ್ಯಾರ್ಥಿನಿಯರ ಆಗ್ರಹದ ಮೇರೆಗೆ ತರಗತಿ ಕೊಠಡಿ ವೀಕ್ಷಿಸಿದ ಶಾಸಕರು ಗುತ್ತಿಗೆದಾರರಿಗೆ ಧೂಳಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಮಸ್ಯೆ ಬಂದಾಗ ನನ್ನ ಗಮನಕ್ಕೆ ತರಬೇಕು ಎಂದು ಪ್ರಾಂಶುಪಾಲೆ ವೇದಶ್ರೀ

ನಿಡ್ಕರಿಗೆ ಶಾಸಕರು ತಿಳಿಸಿದರು. ಆರೋಪ ಪ್ರತ್ಯಾರೋಪ, ಪ್ರತಿಭಟನ ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ

ಬಿಜೆಪಿ ನಾಯಕರು ಆಗಮಿಸಿ ವಿದ್ಯಾರ್ಥಿನಿಯರ ಆಳಲು ಆಲಿಸಿದರು, ಸಂಜೀವ ಮಠಂದೂರು ಮಾತನಾಡಿ, ವಿದ್ಯಾರ್ಥಿನಿಯರು ಬೀದಿಯಲ್ಲಿ ಕುಳಿತುಕೊಳ್ಳಬೇಕಾದ ಸ್ಥಿತಿ ಪುತ್ತೂರಿನಲ್ಲಿ ಸೃಷ್ಟಿಯಾಗಿರುವುದು ಇದೇ ಪ್ರಥಮ ವಿದ್ಯಾರ್ಥಿನಿಯರ ಹೋರಾಟಕ್ಕೆ ನಾವು ಪೂರ್ಣ ಬೆಂಬಲ ನೀಡುತ್ತೇವೆ ಎಂದರು.

ಇದಾದ ಕೆಲ ಹೊತ್ತಲ್ಲೇ ಆಗಮಿಸಿದ ಶಾಸಕ

ಪ್ರತಿಭಟನೆ ವಾಪಸ್

ಮುಂದಿನ 45 ದಿನಗಳಲ್ಲಿ ಬೊಳುವಾರಿನ ಹೊಸ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು. ಧೂಳಿನ ಸಮಸ್ಯೆ ಪರಿಹರಿಸಲು ಗುತ್ತಿಗೆದಾರರಿಗೆ ಸೂಚನೆ ನೀಡುತ್ತೇನೆ ಎಂದು ಶಾಸಕರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಅಶೋಕ್ ರೈ ಪ್ರತಿಭಟನೆಯ ಸ್ಥಳಕ್ಕೆ ಬಂದು ಭಾಷಣ ಮಾಡಿದವರು ಈ ಹಿಂದೆ ಶಾಸಕರಾಗಿ ದೈವರು. ಅದರಿಂದ ಕಟ್ಟಡ ನಿರ್ಮಾಣ ಮಾಡುವುದು ಯಾಕೆ ಸಾಧ್ಯವಾಗಲಿಲ್ಲ ಅವರದ್ದೇ ಸರಕಾರ ಇರುವಾಗ ಒಂದು ರೂ. ತರಲಾಗಲಿಲ್ಲ. ಅವರ ಕುಮ್ಮಕ್ಕಿನಿಂದಲೇ ಪ್ರತಿಭಟನೆ ನಡೆದಿದೆ ಎಂದು ಪ್ರತ್ಯುತ್ತರ ನೀಡಿದರು.

ತಹಶೀಲ್ದಾರ್ ಕೂಡಲಗಿ, ಡಿವೈಎಸ್ಪಿ ಪ್ರಮೋದ್ ಕುಮಾರ್ ಮತ್ತಿತರರು ಈ ಸಂದರ್ಭಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!