
ಸಾ ಲು ಸಾಲು ವಿಮಾನ ದುರಂತಗಳು (Plane crash) ದೇಶವನ್ನೇ ಬೆಚ್ಚಿಬೀಳಿಸುತ್ತಿದೆ. ಅಜಿತ್ ಪವಾರ್ ವಿಮಾನ ದುರಂತ ಮಾಸುವ ಮುನ್ನವೇ ಮತ್ತೊಂದು ವಿಮಾನ ಅಪಘಾತಕ್ಕೀಡಾಗಿದೆ. ರಾಂಚಿಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಆಂಬ್ಯುಲೆನ್ಸ್ (Air Ambulance) ಸೋಮವಾರ ಅಪಘಾತಕ್ಕೀಡಾಗಿದೆ.
ಏರ್ ಆಂಬ್ಯುಲೆನ್ಸ್‌ನಲ್ಲಿದ್ದ ಏಳು ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿ ಆಗಿದೆ.
ವಿಮಾನ ಅಪಘಾತಕ್ಕೀಡಾಗಿದ್ದು ಹೇಗೆ?
ದುರಂತದ ಬಗ್ಗೆ AAIB ತಂಡ ತನಿಖೆ ಆರಂಭಿಸಿದ್ದು, ಸಾವನ್ನಪ್ಪಿದವರ ಪಟ್ಟಿ ಬಿಡುಗಡೆಯಾಗಿದೆ. ಏರ್ ಆಂಬ್ಯುಲೆನ್ಸ್ ರಾಂಚಿಯಿಂದ ದೆಹಲಿಗೆ ಏಕೆ ಪ್ರಯಾಣಿಸುತ್ತಿತ್ತು? ವಿಮಾನ ಎಲ್ಲಿ ಮತ್ತು ಹೇಗೆ ಅಪಘಾತಕ್ಕೀಡಾಯಿತು? ವಿಮಾನದಲ್ಲಿ ಯಾರು ಇದ್ದರು? ವಿಮಾನವನ್ನು ಯಾವ ಕಂಪನಿ ಹೊಂದಿತ್ತು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ರಾಂಚಿಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ರೆಡ್ ಬರ್ಡ್ ಏವಿಯೇಷನ್ ಏರ್ ಆಂಬ್ಯುಲೆನ್ಸ್ ಸೋಮವಾರ ತಡರಾತ್ರಿ ಚತ್ರಾ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ ಎಂದು ವರದಿ ಆಗಿದೆ. ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಏಳು ಜನರು ಸಾವನ್ನಪ್ಪಿದ್ದಾರೆ.
ಆಂಬ್ಯುಲೆನ್ಸ್ ರಾಂಚಿಯ 41 ವರ್ಷದ ಸಂಜಯ್ ಕುಮಾರ್ ಅವರನ್ನು ಉತ್ತಮ ಚಿಕಿತ್ಸೆಗಾಗಿ ದೆಹಲಿಗೆ ಸಾಗಿಸುತ್ತಿತ್ತು. ಬೆಂಕಿಯಲ್ಲಿ ಅವರು ತೀವ್ರ ಸುಟ್ಟಗಾಯಗಳಿಗೆ ಒಳಗಾಗಿ ದೇವ್‌ಕಮಲ್ ಆಸ್ಪತ್ರೆಗೆ ದಾಖಲಾಗಿದ್ದರು.
ಯಾವ ಕಂಪನಿಯ ಏರ್ ಆಂಬ್ಯುಲೆನ್ಸ್?
ಏರ್ ಆಂಬ್ಯುಲೆನ್ಸ್ ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿತ್ತು. ವಿಮಾನದ ನೋಂದಣಿ ಸಂಖ್ಯೆ VT-AJV. ಅದು ಬೀಚ್‌ಕ್ರಾಫ್ಟ್ C90 ವಿಮಾನವಾಗಿತ್ತು.
ಜಾರ್ಖಂಡ್: ಛತ್ರ ಏರ್ ಆಂಬ್ಯುಲೆನ್ಸ್ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ,
ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದರು
1. ಕ್ಯಾಪ್ಟನ್ ವಿವೇಕ್ ವಿಕಾಸ್ ಬಿಲಾಗತ್
2. ಕ್ಯಾಪ್ಟನ್ ಸವರ್ದೀಪ್ ಸಿಂಗ್
ಈ ವಿಮಾನದಲ್ಲಿ ಒಟ್ಟು 5 ಪ್ರಯಾಣಿಕರಿದ್ದರು
1. ಸಂಜಯ್ ಕುಮಾರ್ – ರೋಗಿ
2. ಅರ್ಚನಾ ದೇವಿ – ಸರ್ವೆಂಟ್
3. ಧುರು ಕುಮಾರ್ – ಸರ್ವೆಂಟ್
4. ಡಾ. ವಿಕಾಸ್ ಕುಮಾರ್ ಗುಪ್ತಾ – ವೈದ್ಯ
5. ಸಚಿನ್ ಕುಮಾರ್ ಮಿಶ್ರಾ -ಪ್ಯಾರಾಮೆಡಿಕ್







