
ಪುತ್ತೂರು: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಮತ್ತು ವಿವಿಧ ಇಲಾಖೆಗಳ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ಪುತ್ತೂರು ತಾಲೂಕು ಮಟ್ಟದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆ.ಡಿ.ಪಿ.) ಸಮಿತಿಯನ್ನು ಸರ್ಕಾರ ನೇಮಕಗೊಳಿಸಿದೆ.
ಈ ಸಂಬಂಧ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಸಮಿತಿಗೆ ರವೀಂದ್ರ ರೈ ನೆಕ್ಕಿಲು, ಸೋಮನಾಥ, ವಿಶಾಲಾಕ್ಷಿ ಜಿ.ಪಿ., ಮೂಸೆ ಕುಂಞ ಹಾಗೂ ಚಂದ್ರಹಾಸ ರೈ ಅವರನ್ನು ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಅಮರನಾಥ ಅವರನ್ನು ಕೂಡ ಸಮಿತಿಗೆ ನೇಮಕಗೊಳಿಸಲಾಗಿದೆ.
ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಸಾರ್ವಜನಿಕ ಸೇವೆಗಳ ಅನುಷ್ಠಾನ ಹಾಗೂ ಯೋಜನೆಗಳ ಪ್ರಗತಿಯನ್ನು ಸಮಿತಿ ತ್ರೈಮಾಸಿಕವಾಗಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಜವಾಬ್ದಾರಿ ಹೊಂದಿದೆ ಎಂದು ತಿಳಿದುಬಂದಿದೆ.









