ಕಚೇರಿಯಲ್ಲಿ ಮಹಿಳಾ ಉದ್ಯೋಗಿಯೊಬ್ಬರಿಗೆ ಕಿರುಕುಳ ನೀಡಿದ ಘಟನೆ ಇದೀಗ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಖಾಸಗಿ ವೇರ್‌ಹೌಸ ಕಚೇರಿಯಲ್ಲಿ ಕೆಲಸದಲ್ಲಿ ಮಗ್ನರಾಗಿ ಕುಳಿತಿದ್ದ ಮಹಿಳಾ ಉದ್ಯೋಗಿ ಬಳಿಗೆ ಸಹಾಯ ನೀಡುವ ನೆಪದಲ್ಲಿ ಪಂದ ಪುರುಷ ಉದ್ಯೋಗಿ ನೇರವಾಗಿ ಲಿಪ್ ಕಿಸ್ ನೀಡಲು ಯತ್ನಿಸಿದ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ವರದಿಯಾಗಿದೆ.

ಕಿರುಕುಳ ನೀಡಿರುವ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.

ತುಡಿಯಲೂರು ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವೇರ್‌ಹೌಸ್ ಕಚೇರಿಯಲ್ಲಿ ಈ ಘಟನೆ ನಡೆದಿದೆ ಎಂದು ಸಿಸಿಟಿವಿ ವಿಡಿಯೋಗಳು ಹೇಳುತ್ತಿದೆ. ಮಹಿಳಾ ಉದ್ಯೋಗಿ ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿದ್ದಳು. ಕೆಲಸದ ನಡುವೆ ಅದೇ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಪುರುಷ ಉದ್ಯೋಗಿ ಆಗಮಿಸಿದ್ದಾನೆ. ಬಳಿಕ ಆಕೆಯ ಬಳಿ ಬಂದು ತುಟಿಗೆ ಮುತ್ತಿಡುವ ಪ್ರಯತ್ನ ಮಾಡಿದ್ದಾರೆ. ಪುರುಷ ಉದ್ಯೋಗಿ ಹತ್ತಿರಬಂದಾಗ ಹೆಚ್ಚು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆತನ ಆಗಮಿಸಿದ ಹಿಂದಿನ ಉದ್ದೇಶವೂ ಮಹಿಳಾ ಉದ್ಯೋಗಿಗೆ ಗೊತ್ತಾಗಿರಲಿಲ್ಲ. ಯಾವಾಗ ಮುಖದ ಹತ್ತಿರಬಂದು ಕಿಸ್ ನೀಡಲು ಪ್ರಯತ್ನಿಸುತ್ತಿದ್ದಂತೆ ಮಹಿಳಾ ಉದ್ಯೋಗಿ ಎಚ್ಚೆತ್ತುಕೊಂಡಿದ್ದಾರೆ.

ಪುರುಷ ಉದ್ಯೋಗಿಯನ್ನು ತಳ್ಳಿ ದೂರ ಸರಿದ ಮಹಿಳಾ ಉದ್ಯೋಗಿ

ಕಿಸ್ ನೀಡಲು ಪ್ರಯತ್ನಿಸಿ ಕಿರುಕುಳ ನೀಡಲು ಯತ್ನಿಸುತ್ತಿದ್ದಂತೆ ಮಹಿಳಾ ಉದ್ಯೋಗಿ ತಕ್ಷಣವೇ ಪುರುಷ ಉದ್ಯೋಗಿಯನ್ನು ತಳ್ಳಿ ದೂರ ಸರಿದಿದ್ದಾರೆ. ಬಳಿಕ ಕೈ ಸನ್ನೆ ಮೂಲಕ ಎಚ್ಚರಿಕೆ ನೀಡಿದ್ದಾರೆ. ಮಹಿಳಾ ಉದ್ಯೋಗಿ ಗರಂ ಆದ ಬೆನ್ನಲ್ಲೇ ಪುರುಷ ಉದ್ಯೋಗಿ ಸೈಲೆಂಟ ಆಗಿದ್ದಾನೆ. ಪುರುಷ ಉದ್ಯೋಗಿ ಯಾರಿಗೂ ತಿಳಿಸದಂತೆ ಮನವಿ ಮಾಡಿದ್ದಾನೆ.

ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯದಲ್ಲಿ ವೈರಲ್ ಆಗಿತ್ತು. ಕಚೇರಿಯಲ್ಲಿ ಮಹಿಳಾ ಉದ್ಯೋಗಿಗೆ ಕಿರುಕುಳ ಎಂದು ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಕಚೇರಿ ಪತ್ತೆ ಹಚ್ಚಿ ಮಹಿಳೆಯನ್ನು ವಿಚಾರಿಸಿದ್ದಾರೆ. ಬಳಿಕ ಸಿಸಿಟಿವಿ ವಿಡಿಯೋಗಳನ್ನು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾರ್ಯಪ್ರವೃತ್ತರಾದ ಪೊಲೀಸರು 28 ವರ್ಷದ ಆರೋಪಿಯನನು ಅರೆಸ್ಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!