ತಾಲೂಕಿನ ಹನುಮಗಿರಿ ಶ್ರೀ ಕೋದಂಡರಾಮ–ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ನಾಳೆ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದಿವ್ಯ ಆಭರಣಗಳು (ತಿರುವಾಭರಣ) ಸಂರಕ್ಷಿಸುವ ಪಂದಳ ರಾಜಮನೆತನದ ಮಹಾರಾಜಾ ಪುಣರ್ತಂ ನಾರಾಯಣ ವರ್ಮ ಅವರು ಮೊದಲ ಬಾರಿಗೆ ಆಗಮಿಸಲಿದ್ದಾರೆ.
ಏಪ್ರಿಲ್ 12ರಂದು ನಡೆಯುವ ಬ್ರಹ್ಮಕಲಶೋತ್ಸವದ ಅಂಗವಾಗಿ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಕೋದಂಡರಾಮ ಹಾಗೂ ಪಂಚಮುಖಿ ಆಂಜನೇಯರ ದರ್ಶನ ಪಡೆದು ಭಕ್ತರನ್ನು ಹರಸಲಿದ್ದಾರೆ.
ಪುಣರ್ತಂ ನಾರಾಯಣ ವರ್ಮ ಅವರು ಕೇರಳ ರಾಜ್ಯ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಜ್ಯಾಧ್ಯಕ್ಷರಾಗಿದ್ದಾರೆ. ಜೊತೆಗೆ ಪಂದಳಂ ಅರಮನೆ ಆಡಳಿತ ಮಂಡಳಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.














