ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಇಂತಹದೊಂದು ಅಭೂತಪೂರ್ವ ಮತ್ತು ಯಾರಿಗೂ ಊಹಿಸದ ಭಾರಿ ಹೈಡ್ರಾಮಾ ಇಂದು ಲೋಕಭವನ ನಡೆದಿದೆ. ಹೈಕಮಾಂಡ್ ಆದೇಶದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಚಿವರ ದಂಡಿನೊಂದಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಕೊನೆಯ ಕ್ಷಣದಲ್ಲಿ ಕಾನೂನಾತ್ಮಕವಾಗಿ ಭಾರಿ ದೊಡ್ಡ ಟ್ವಿಸ್ಟ್ ಎದುರಾಗಿದೆ.

ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು ಮುಖ್ಯಮಂತ್ರಿಗಳ ರಾಜೀನಾಮೆ ಪತ್ರವನ್ನು ಸ್ವೀಕರಿಸಲು ನೇರವಾಗಿ ನಿರಾಕರಿಸಿದ್ದಾರೆ. ನಾವು ಮುಖ್ಯಮಂತ್ರಿಗಳ ರಾಜೀನಾಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಅವರು ಸಿದ್ದರಾಮಯ್ಯ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ರಾಜೀನಾಮೆ ನಿರಾಕರಣೆಗೆ ಅಸಲಿ ಕಾರಣವೇನು?
ರಾಜಕೀಯ ಪ್ರಮುಖರೊಬ್ಬರು ಹಠಾತ್ ವೈಯಕ್ತಿಕ ತುರ್ತು ಪರಿಸ್ಥಿತಿಯ ಕಾರಣಕ್ಕಾಗಿ ಪ್ರಸ್ತುತ ಮಧ್ಯಪ್ರದೇಶದ ಇಂದೋರ್‌ಗೆ ತೆರಳಿದ್ದಾರೆ. ರಾಜ್ಯಪಾಲರ ಗೈರುಹಾಜರಿಯಲ್ಲಿ, ಅವರ ವಿಶೇಷ ಕಾರ್ಯದರ್ಶಿಗೆ ಕೇವಲ ಆಡಳಿತಾತ್ಮಕ ಪತ್ರಗಳನ್ನು ಸ್ವೀಕರಿಸುವ ಅಧಿಕಾರವಿದೆಯೇ ವಿನಾ, ಇಡೀ ಸರ್ಕಾರದ ಪತನ ಅಥವಾ ಬದಲಾವಣೆಗೆ ಕಾರಣವಾಗುವ ಮುಖ್ಯಮಂತ್ರಿಯವರ ಅಧಿಕೃತ ರಾಜೀನಾಮೆ ಪತ್ರವನ್ನು ಸ್ವೀಕರಿಸುವ ಮತ್ತು ಅಂಗೀಕರಿಸುವ ಸಾಂವಿಧಾನಿಕ ಅಧಿಕಾರ ಇರುವುದಿಲ್ಲ. ಸಾಂವಿಧಾನಿಕ ನಿಯಮಗಳ ಪ್ರಕಾರ ಮುಖ್ಯಮಂತ್ರಿಗಳ ರಾಜೀನಾಮೆಯನ್ನು ಖುದ್ದಾಗಿ ರಾಜ್ಯಪಾಲರೇ ಸ್ವೀಕರಿಸಬೇಕು. ಹಾಗಾಗಿ ದಯವಿಟ್ಟು ಅವರು ಬೆಂಗಳೂರಿಗೆ ವಾಪಸ್ ಬಂದ ಬಳಿಕವೇ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿ ಎಂದು ಪ್ರಭುಶಂಕರ್ ಅವರು ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!