ಪುತ್ತೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಟಾಟಾ ಪವರ್ ಕಂಪನಿಗೆ ಪ್ಯಾರಲಲ್ ಲೈಸೆನ್ಸ್ ನೀಡಿರುವುದನ್ನು ವಿರೋಧಿಸಿ ನೌಕರರ ಒಕ್ಕೂಟದ ವತಿಯಿಂದ ಜೂನ್ 15ರಂದು ಬೆಳಿಗ್ಗೆ 9 ಗಂಟೆಗೆ ಪುತ್ತೂರು ಮೆಸ್ಕಾಂ ವಿಭಾಗ ಕಚೇರಿ ಆವರಣದಲ್ಲಿ ‘ಗೇಟ್ ಮೀಟಿಂಗ್’ ಆಯೋಜಿಸಲಾಗಿದೆ.
ವಿದ್ಯುತ್ ಸರಬರಾಜು ಸಂಸ್ಥೆಗಳ ಖಾಸಗೀಕರಣಕ್ಕೆ ದಾರಿ ಮಾಡಿಕೊಡುವ ಕ್ರಮಗಳ ವಿರುದ್ಧ ಸಭೆಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಲಾಗುವುದು. ಅಲ್ಲದೆ, ಪ್ಯಾರಲಲ್ ಲೈಸೆನ್ಸ್ ನೀಡುವುದರಿಂದ ಸಾರ್ವಜನಿಕ ವಿದ್ಯುತ್ ವಿತರಣಾ ವ್ಯವಸ್ಥೆ, ನೌಕರರು ಹಾಗೂ ಗ್ರಾಹಕರ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಸಂಘಟನೆ ತಿಳಿಸಿದೆ.







