ಪುತ್ತೂರು, ಜೂ.16: ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪುತ್ತೂರಿನ 110/33/11 ಕೆವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕಬಕ, ನಗರ ಹಾಗೂ ಬಲ್ನಾಡು (ಕೆದಿಲ) ಫೀಡರ್‌ಗಳಲ್ಲಿ ಜೂನ್ 18ರಂದು (ಗುರುವಾರ) ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಈ ಅವಧಿಯಲ್ಲಿ ಕಲ್ಲೇಗ, ನಗರ ಜಂಕ್ಷನ್, ಕಬಕ, ಮುರ, ವಿದ್ಯಾಪುರ, ರಕೇಶ್ವರಿ ವಠಾರ, ಶೇವಿರೆ, ಮಂಜಲ್ಪಡ್ಡು, ಕೆ.ಎಂ. ಸ್ಟೋರ್, ಉರ್ಲಾಂಡಿ, ಬಪ್ಪಳಿಗೆ, ವಿವೇಕಾನಂದ ಕಾಲೇಜು ಸುತ್ತಮುತ್ತ, ಪಡ್ಡಾಯೂರು, ಪೆರಿಯತ್ತೋಡಿ, ಗಣೇಶ್‌ಭಾಗ್, ಸನ್ನಿಧಿ ಲೇಔಟ್, ನವನಗರ, ಕಾರ್ಜಾಲು, ಚನಿಲ, ಕಪ್ಪೆಕೆರೆ ಸೇರಿದಂತೆ ಸಂಬಂಧಿತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ಬಳಕೆದಾರರು ಇದನ್ನು ಗಮನಿಸಿ ಸಹಕರಿಸುವಂತೆ ಮೆಸ್ಕಾಂನ ನಗರ ಉಪವಿಭಾಗದ ಅಧಿಕಾರಿಗಳು ಮನವಿ ಮಾಡಿದ್ದಾರೆ.






