ಮೂಡಬಿದಿರೆ: ತವರು ಮನೆಯಿಂದ ವಿವಾಹಿತೆಯೊಬ್ಬರು ನಾಪತ್ತೆಯಾಗಿರುವ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ.ಶಿಕಾರಿಪುರ ನಿವಾಸಿ ಸಬೀರಾ ಬಾನು (20) ನಾಪತ್ತೆಯಾದವರು.ಎರಡು ವರ್ಷಗಳ ಹಿಂದೆ ಶಿಕಾರಿಪುರದ ಅಶ್ವಕ್ ಅಹಮ್ಮದ್ ಅವರನ್ನು ವಿವಾಹವಾಗಿದ್ದ ಸಬೀರಾ ಬಾನು ಅವರು ಜು.10ರಂದು ತವರು ಮನೆಗೆ ಬಂದಿದ್ದರು. ಬಳಿಕ ಜು.27ರಂದು ಮನೆಯಿಂದ ಹೊರಗೆ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.ಈ ಸಂಬಂಧ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.










