ವಾಕಥಾನ್ – ಹಿರಿಯ ಇಂಜಿನಿಯರ್ಸ್ ಗಳಿಗೆ ಗೌರವ

ದರ್ಬೆ ಅಶ್ವಿನಿ ಹಾಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ

‘ಹಿಂದೆಲ್ಲಾ ಮೇಸ್ತ್ರಿಯೇ ಇಂಜಿನಿಯರ್ – ಇವತ್ತು ಸರಿಯಾದ ಸಲಹೆ ಪಡೆಯಲು ಇಂಜಿನಿಯರ್ಸ್ ಅತ್ಯಗತ್ಯ’

ಪುತ್ತೂರು: ಸೆ.೧೫ರಂದು ಭಾರತ ರತ್ನ ಸರ ಎಂ ವಿಶ್ವೇಶ್ವರಯ್ಯ ಅವರ ೧೬೪ನೇ ಜನ್ಮದಿದ ಅಂಗವಾಗಿ ಆಚರಿಸಲಾಗುವ ಇಂಜಿನಿರ‍್ಸ್ ಡೇ ಕಾರ್ಯಕ್ರಮಕ್ಕೆ  ಸಾಮಾಜಿಕ ಬದ್ದತೆ, ವೃತ್ತಿಪರ ಒಗ್ಗಟ್ಟಿನ ಅನುಗುಣವಾಗಿ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿರ‍್ಸ್ ಪುತ್ತೂರು ಕೇಂದ್ರದ ವತಿಯಿಂದ  ಪುತ್ತೂರು ನಗರದಲ್ಲಿ ವಾಕಥಾಮ್ ಮತ್ತು ದರ್ಬೆ ಅಶ್ವಿನಿ ಹಾಲ್‌ನಲ್ಲಿ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಇಂಜಿನಿರ‍್ಸ್ಗಳನ್ನು ಗೌರವಿಸುವ ವಿಶೇಷ ಕಾರ್ಯಕ್ರಮ ನಡೆಯಿತು.

ವಾಕಥಾನ್ ಬಳಿಕ ದರ್ಬೆ ಅಶ್ವಿನಿ ಹಾಲ್‌ನಲ್ಲಿ ನಡೆದ ಇಂಜಿನಿರ‍್ಸ್ ಡೇ ಮತ್ತು ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿರ‍್ಸ್ ಪುತ್ತೂರು ಕೇಂದ್ರದ ವಾರ್ಷಿಕ ಕಾರ್ಯಕ್ರವವನ್ನು ಅವರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿ ಮಾತನಾಡಿ ಪುತ್ತೂರು ಸೇರಿಸಿ ಮಂಗಳೂರು ಅಭಿವೃದ್ಧಿಯಾಗಿದೆ ಎಂದು ತೋರಿಸಬೇಕಾದರೆ ಅದು ಇಂಜಿನಿರ‍್ಸ್ನಿAದೆAದು ಹೇಳಬಯಸುತ್ತೇನೆ. ಬೇರೆ ಯಾವ ಸರಕಾರದ ದುಡ್ಡಿನಿಂದ ಮಂಗಳೂರು ನಗರ ಆಗಿ ಬೆಳೆಯಲಿಲ್ಲ. ಸರಕಾರದ ದುಡ್ಡಿನಿಂದ ರಸ್ತೆ ಮಾಡಿರಬಹುದು. ಆದರೆ ನಗರ ಆಗಿ ಬೆಳೆದಿರುವುದು ಇಂಜಿನಿರ‍್ಸ್ನಿAದ. ಪ್ರವೈಟ್ ಇನ್‌ವೆಸ್ಟ್ಮೆಂಟಿನಿAದ ಈ ಕೆಲಸ ಕಾರ್ಯ ಆಗಿದೆ ಎಂದರು. ನನಗೂ ಇಂಜಿನಿಯರ್‌ಗೆ ಬಹಳ ಹತ್ತಿರದ ಸಂಬAದ ಯಾಕೆಂದರೆ ಇಂಜಿನಿರ‍್ಸ್ ಅನ್ನು ಬಳಕೆ ಮಾಡುವವವರು ಬಹಳ ಕಡಿಮೆ ಇತ್ತು. ಆದರೆ ಇವತ್ತು ಪುತ್ತೂರಿನಲ್ಲೂ ಈಗ ಜನರು ಇಂಜಿನಿರ‍್ಸ್ಗಳ ಸಲಹೆ ಪಡೆಯಲು ಆರಂಭಿಸಿದ್ದಾರೆ. ಹಿಂದೆಲ್ಲ ಮೇಸ್ತಿçಯೇ ಇಂಜಿನಿಯರ್. ಇವತ್ತು ಹಾಗಲ್ಲ ಸರಿಯಾದ ಸಲಹೆ ಪಡೆಯಲು ಇಂಜಿನಿಯರ್ ಅಗತ್ಯತೆ ಇದೆ. ಇವತ್ತು ಇಂಜಿನಿರ‍್ಸ್ಗಳಿಗೆ ಒಳ್ಳೆಯ ಭವಿಷ್ಯ ಇದೆ. ಅದನ್ನು ಬಳಸುವ ಕೆಲಸ ಆಗಬೇಕು. ಇದಕ್ಕೆ ಸರಿಯಾಗಿ ಸರಕಾರ ಸರಿಯಾದ ಕಾನೂನು ಜಾರಿಗೆ ಮಾಡಬೇಕು ಎಂದರು.

ಪುತ್ತೂರಿನ ಅಭಿವೃದ್ಧಿಯ ದೃಷ್ಟಿಯಿಂದ ಮಾಸ್ಟರ್ ಪ್ಲಾನ್ ಬೇಕು. ರಸ್ತೆ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ಆಗಬೇಕು. ಮಾಸ್ಟರ್ ಪ್ಲಾನ್‌ನ ಕರಡುಪ್ರತಿಯಾಗಿ ೫ ವರ್ಷ ಆಗಿದೆ. ಸರಕಾರಕ್ಕೆ ಹೋಗಿ ಬರಬೇಕಾದರೆ ಕನಿಷ್ಠ ೪ ವರ್ಷ ಬೇಕು. ಇಂತಹ ಸಂದರ್ಭದಲ್ಲಿ ಅಭಿವೃದ್ದಿ ಹೇಗಾಗಬಹುದು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಈ ಅವಧಿಯಲ್ಲಿ ಸಿಕ್ಕಿದಲ್ಲಿ ಕಟ್ಟಡ ಎದ್ದು ನಿಲ್ಲುತ್ತದೆ. ಇವೆಲ್ಲ ಟೌನ್ ಪ್ಲಾನಿಂಗ್ ಸರಿಯಲ್ಲದಾಗ ಸಮಸ್ತೆ ಅಗುತ್ತದೆ. ಇದಕ್ಕೆ ಇಂಜಿನಿರ‍್ಸ್ಗಳ ಕಾಂಟ್ರಿಬ್ಯೂಷನ್ ಬೇಕು. ಜಡ್‌ಆರ್, ಎಪ್.ಎ ಬಗ್ಗೆ ಗೊತ್ತಿದ್ದವರು ಈ ಕುರಿತು ಸಲಹೆ ನೀಡಬೇಕು ಎಂದು ಶಾಸಕರು ಹೇಳಿದರು.  ಇದೇ ಸಂದರ್ಭ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿರ‍್ಸ್ ಪುತ್ತೂರು ಇದರ ವತಿಯಿಂದ ನಿವೇಶನಕ್ಕೆ ಸಲ್ಲಿಸಿದ ಮನವಿಯ ಕುರಿತು ಶಾಸಕರು ಮಾತನಾಡಿ ಜಾಗ ನಗರ ಬಿಟ್ಟು ಗ್ರಾಮಾಂತರಲ್ಲಿ ನೋಡಿ ಗುರುತಿಸಿ. ಮುಖ್ಯಮಂತ್ರಿಯವರ ಮೂಲಕ ಕೊಡಿಸುವ ಕೆಲಸ ಮಾಡುತ್ತೇನೆ. ಇದರ ಜೊತೆ ನಿಮ್ಮ ಆಶೀರ್ವಾದ ಸದಾ ಇರಬೇಕೆಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಹಾಯಕ ಕಮೀಷನರ್ ಜುಬಿನ್ ಮೊಹಪಾತ್ರ ಅವರು ಮಾತನಾಡಿ ಮನುಷ್ಯ ಸಮಾಜದ ಕನಸಿನ ಆಕಾರಕ್ಕೆ ರೂಪ ಕೊಡುವವರು ಇಂಜಿನಿಯರ್. ಮಾನವ ಇತಿಹಾಸವೇ ಇಂಜಿನಿಯರ್ ಎಂದ ಅವರು ಯಾಕೆಂದರೆ ಮೊಹೇಂಜೋದಾರ ಮತ್ತು ಹರಪ್ಪ ನಾಗರಿಕತೆಯಲ್ಲಿ ಅಲ್ಲಿನ ನಗರ ಅದ್ಭುತವಾಗಿತ್ತು. ೫ ಸಾವಿರ ವರ್ಷದ ಹಿಂದೆ ಆಗ ಯಾರಿಗೂ ಡಿಗ್ರಿ ಇರಲಿಲ್ಲ. ಆದರೆ ಅವರಿಗೆ ಇಂಜಿನಿಯರ್ ಜ್ಞಾನ ಅವರಲ್ಲಿತ್ತು. ಇವತ್ತು ಜನಸಂಖ್ಯೆ ಜಾಸ್ತಿ ಆಗುತ್ತಿದೆ. ಆದರೆ ಜಮೀನು ಜಾಸ್ತಿ ಆಗುತ್ತಿಲ್ಲ. ಈ ಸಂದರ್ಭ ಅದನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಇಂಜಿನಿರ‍್ಸ್ ತಂತ್ರಜ್ಞಾನ ಬಳಸಬೇಕು. ಈ ನಿಟ್ಟಿನಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರು ಪ್ರಪಂಚದಲ್ಲೇ ಬಹಳ ದೊಡ್ಡ ಇಂಜಿನಿಯರ್ ಅವರು ಬರಿ ಇಂಜಿನಿಯರ್ ಆಗಿರದೆ ನೈತಿಕೆಯಲ್ಲೂ ಮಾರ್ಗದರ್ಶಕರಾಗಿದ್ದಾರೆ. ಇವತ್ತು ತಾಪಮಾನಕ್ಕೆ ಗ್ರೀನ್ ಎನರ್ಜಿ ನೀಡಬೇಕಾಗಿರುವ ಇಂಜಿನಿರ‍್ಸ್ಗಳು ನಮ್ಮಲ್ಲಿ ಇದ್ದಾರೆ.  ಪ್ರಪಂಚದಲ್ಲೇ ಅತೀ ಕಡಿಮೆ ವೆಚ್ಚದಲ್ಲಿ ಚಂದ್ರಯಾನ ಮಾಡಿದ ದೇಶ ಭಾರತ, ಪ್ರಪಂಚAದಲ್ಲೇ ಕರ್ನಾಟಕದ ಬೆಂಗಳೂರು ಸ್ಟಾಟಪ್ ಕ್ಯಾಪಿಟಲ್ ಎಂಬ ಸ್ಥಾನ ಹೊಂದಿದೆ. ಸರಕಾರಿ ಕಾರ್ಯಕ್ರಮದಲ್ಲೂ ಎಲ್ಲಾ ಯೋಜನೆಗಳಿಗೆ ಇಂಜಿನಿರ‍್ಸ್ ಬಹಳ ಅಗತ್ಯ. ಸ್ವಾತಂತ್ರö್ಯ ಬಂದ ಕೇವಲ ೭೬ ವರ್ಷದಲ್ಲಿ ನಾವು ಸೂಪರ್ ಪವರ್ ಆಗಿದ್ದೇವೆ. ಇವತ್ತು ಅನೇಕ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿದ್ದೇವೆ. ನಮ್ಮ ಹಿರಿಯರು ಮಾಡಿದ ಸಾಧನೆ ಕೆಲಸ ನಮ್ಮ ಗಮನದಲ್ಲಿದ್ದರೆ ಮುಂದೆ ಇನ್ನಷ್ಟು ಉತ್ತಮ ಕೆಲಸ ಮಾಡಲು ಸಾಧ್ಯ ಎಂದರು.

ಹಿರಿಯ ಇಂಜಿನಿಯರ್‌ಗಳಾಗಿರುವ ವೇಣುಗೋಪಾಲ್ ಶೆಣೈ ಅವರನ್ನು ಕಾರ್ಯಕ್ರಮದಲ್ಲಿ ಜೀವಮಾನ ಪ್ರಶಸ್ತಿ  ಸನ್ಮಾನಿಸಲಾಯಿತು.

ಇನ್ನೋವ ಹಿರಿಯ ಇಂಜಿನಿಯರ್ ನಾರಾಯಣ ಮಯ್ಯ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಶಿವರಾಮ್ ಎಂ.ಎಸ್ ಸನ್ಮಾನಿತರನ್ನು ಪರಿಚಯಿಸಿದರು. ಸನ್ಮಾನಿತ ವೇಣುಗೋಪಾಲ್ ಶೆಣೈ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಉಡುಪಿಯ ಗ್ರಾಮೀಣಾಭಿವೃದ್ದಿ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿರು ಪುತ್ತೂರಿನ ಶರಣ್ಯ, ಬಂಟ್ವಾಳ ಲೋಕೋಪಯೋಗಿ ಇಲಾಖೆಯ ಜ್ಯೂನಿಯರ್ ಇಂಜಿನಿಯರ್ ರಶೀದ್ ಅವರು ಪುತ್ತುರು ಸಂಘದ ಸದಸ್ಯತ್ವ ಪಡೆದ ಹಿನ್ನೆಲೆಯಲ್ಲಿ ಅವರನ್ನು ಗೌರವಿಸಲಾಯಿತು.

ಇದೆ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಪರೀಕ್ಷೆಯಲ್ಲಿ ಸಿವಿಲ್ ಇಂಜಿನಿಯರಿAಗ್ ವಿಭಾಗದಲ್ಲಿ ರ‍್ಯಾಂಕ್ ಪಡೆದ ವಿವೇಕಾನಂದ ಕಾಲೇಜಿನ ಕೇಶವ್‌ಪ್ರಜ್ವಲ್ ಮತ್ತು ಪಲ್ಲವಿ ಅವರನ್ನು ಸನ್ಮಾನಿಸಲಾಯಿತು.

ಇಂಜಿನಿರ‍್ಸ್ ಡೇ ಮತ್ತು ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿರ‍್ಸ್ ಇದರ ಪುತ್ತೂರು ಕೇಂದ್ರ ಸಮಿತಿ ಅಧ್ಯಕ್ಷ ಪ್ರಮೋದ್ ಕುಮಾರ್,ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿರ‍್ಸ್ ರಾಷ್ಟಿçÃಯ ಪೂರ್ವಾ ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ,ಸಂಘದ ಕಾರ್ಯದರ್ಶಿ ವಿನೋದ್ ಕುಮಾರ್ ಕೆ,ಕೋಶಾಧಿಕಾರಿ ಚೇತನ್,ಪುಡಾ ಸದಸ್ಯ ಕಾರ್ಯದರ್ಶಿ ಅಭಿಲಾಷ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!