
ಲೆಬನಾನ್ : ಇಸ್ರೇಲ್ ಸೇನೆ ಮೇಲೆ ಹಿಜ್ಜುಲ್ಲಾ ಬಂಡುಕೋರ ಸಂಘಟನೆ ಮತ್ತೆ ದಾಳಿ ನಡೆಸಿದೆ. ನಿನ್ನೆ ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿದ ಬೆನ್ನಲ್ಲೇ, ಇಂದು ಇಸ್ರೇಲ್ ಸೇನೆಯನ್ನು ಗುರಿಯಾಗಿಸಿಕೊಂಡು ಹಿಜ್ಬುಲ್ಲ ವಾಯು ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.ಇಸ್ರೇಲ್ ನ ದಕ್ಷಿಣ ಟೆಲ್ ಅವಿವ್‌ನಲ್ಲಿರುವ ವಾಯುನೆಲೆ ಮೇಲೆ ಡ್ರೋನ್ ದಾಳಿ ನಡೆಸಿದ್ದೇವೆ ಎಂದು ಹಿಬ್ಬುಲ್ಲಾ ಸಂಘಟನೆ ಹೇಳಿದೆ.
ಇತ್ತೀಚಿನ ಒಂದು ತಿಂಗಳಿನಿಂದ ಇಸ್ರೇಲ್ ಮೇಲೆ ಯುದ್ಧ ಸಾರಿರುವ ಹಿಜ್ಜುಲ್ಲಾ ಇದುವರೆಗೂ ಗಡಿ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿತ್ತು. ಆದ್ರೆ ಇದೇ ಮೊದಲ ಬಾರಿಗೆ ಇಸ್ರೇಲ್‌ನ ಪ್ರಮುಖ ಪ್ರದೇಶವಾದ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ.
ಕೇವಲ ಡ್ರೈನ್ ದಾಳಿ ಮಾತ್ರವಲ್ಲದೆ, ದಕ್ಷಿಣ ಲೆಬನಾನ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್ ಪಡೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಹಿಬ್ಬುಲ್ಲಾ ಹೇಳಿದೆ. ಈ ಮೂಲಕ ಇಸ್ರೇಲ್ ಮತ್ತು ಹಿಜ್ಬುಲ್ಲ ನಡುವಿನ ಸಮರ ಮತ್ತಷ್ಟು ತಾರಕಕ್ಕೇರಿದೆ.
